ವ್ಯಾಕರಣ ವಿಭಾಗದ ಕೆಲವು ಆಯ್ದ ಬಹುಆಯ್ಕೆಯ ಪ್ರಶ್ನೆಗಳು-
ಉತ್ತರಸಹಿತ.
( ಇನ್ನು ಕೆಲವು ಪ್ರಶ್ನೆಗಳನ್ನು ಮುಂದಿನ ಭಾಗದಲ್ಲಿ
ನೀಡಲಾಗುವುದು
ಮತ್ತು ೪ ಅಂಕದ ಮೊದಲೆರಡು
ಪದಗಳಿಗಿರುವ
ಸಂಬಂಧದ ಪ್ರಶ್ನೆಗಳನ್ನು ನೀಡಲಾಗುವುದು)
ವರ್ಣಮಾಲೆ:
೧. ಅವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ.
೧. ೭ ೨. ೯
೩. ೧೩ ೪. ೫
೨. ಅಲ್ಪಪ್ರಾಣಾಕ್ಷರಗಳ
ಸಂಖ್ಯೆ:
೧. ೫ ೨. ೧೦
೩. ೧೩ ೪. ೦
೩. ಕನ್ನಡ ವರ್ಣಮಾಲೆಯಲ್ಲಿರುವ
ಮಹಾಪ್ರಾಣಾಕ್ಷರಗಳು;
೧. ೩೪ ೨. ೧೦
೩. ೨೫ ೪. ೫೨
೪. ವ್ಯಂಜನಾಕ್ಷರಕ್ಕೆ
ಸ್ವರಾಕ್ಷರವು ಸೇರಿದಾಗ ಅಗುವ
ರೂಪವನ್ನು ಹೀಗೆನ್ನುತ್ತಾರೆ.
೧. ಸ್ವರಾಕ್ಷರ ೨. ಗುಣಿತಾಕ್ಷರ
೩. ಸಂಯುಕ್ತಾಕ್ಷರ ೪. ಏಕಾಕ್ಷರ
೫. ಕನ್ನಡ ವರ್ಣಮಾಲೆಯಲ್ಲಿರುವ
ವರ್ಗದ ಕೊನೆಯಾಕ್ಷರವನ್ನು
ಹೀಗೆನ್ನುತ್ತಾರೆ.
೧. ಸ್ವರಗಳು ೨. ಅನುನಾಸಿಕಗಳು
೩. ಯೋಗವಾಹಗಳು ೪.
ವ್ಯಂಜನಗಳು
೬. ಕನ್ನಡ ವರ್ಣಮಾಲೆಯಲ್ಲಿರುವ
ಅನುನಾಸಿಕ ಅಕ್ಷರಗಳ ಸಂಖ್ಯೆ:
೧. ೧೩ ೨.
೫
೩. ೨ ೪. ೯
೭. ’ತ’ ವರ್ಗದ ಅನುನಾಸಿಕಾಕ್ಷರ
ಇದು
೧. ಮ ೨. ನ
೩. ಣ
೪. ಜ್ಞ
೮. ಎರಡು ಮಾತ್ರಾಕಾಲದಲ್ಲಿ
ಉಚ್ಚರಿಸುವ ಸ್ವರಗಳಿಗೆ ಹೀಗೆನ್ನುವರು.
೧. ದೀರ್ಘಸ್ವರ ೨. ಹ್ರಸ್ವಸ್ವರ
೩. ಪ್ಲುತಸ್ವರ ೪. ಸಪ್ತಸ್ವರ
೯. ಇವುಗಳಲ್ಲಿ ಹ್ರಸ್ವಸ್ವರಗಳ
ಗುಂಪು:
೧. ಕ,ಗ,ಜ,ಡ, ೨. ಅ,ಇ,ಉ,ಏ,ಓ
೩. ಅ,ಇ,ಉ,ಋ,ಎ ೪. ಆ,ಈ,ಊ,ನ
೧೦. ಕನ್ನಡ ವರ್ಣಮಾಲೆಯಲ್ಲಿ ಪ್ರತಿ ವರ್ಗದ ಒಂದು ಮತ್ತು ಮೂರನೇ
ಅಕ್ಷರವನ್ನು ಹೀಗೆಂದು
ಕರೆಯುತ್ತೇವೆ.
೧. ಅಲ್ಪಪ್ರಾಣ ೨. ಮಹಾಪ್ರಾಣ
೩. ವ್ಯಂಜನಗಳು ೪. ಅನುನಾಸಿಕ
೧೧. ಅಂತ:ಕರಣ
ಈ ಪದದಲ್ಲಿ ಗೆರೆ ಎಳೆದಿರುವ ಅಕ್ಷರದ ವಿಧ.
೧. ವಿಸರ್ಗ ೨. ಅನುಸ್ವಾರ
೩. ಅಲ್ಪಪ್ರಾಣ ೪. ಮಹಾಪ್ರಾಣ
೧೨. ’ಅನುಭವ’ ಪದದಲ್ಲಿರುವ
ಅವರ್ಗೀಯ ವ್ಯಂಜನಾಕ್ಷರ:
೧. ಅ ೨. ನ
೩. ಭ ೪. ವ
೧೩. ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳು:
೧. ೧೩ ೨.
೯
೩. ೩೪ ೪. ೨
೧೪. ಕನ್ನಡ ವರ್ಣಮಾಲೆಯಲ್ಲಿ ಒಂದು ಮಾತ್ರಾಕಾಲದಲ್ಲಿ
ಉಚ್ಚರಿಸುವ ಅಕ್ಷರಗಳು:
೧. ದೀರ್ಘಸ್ವರ ೨. ಹ್ರಸ್ವಸ್ವರ
೩. ಪ್ಲುತಸ್ವರ ೪. ಸುಸ್ವರ
ಸಂಧಿಗಳು
೧. ’ವಾಗ್ದೇವಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
೧. ಗುಣಸಂಧಿ
೨. ವೃದ್ಧಿಸಂಧಿ
೩. ಜಸ್ತ್ವಸಂಧಿ ೪. ಆದೇಶಸಂಧಿ
೨. ’ಋಷ್ಯಾಶ್ರಮ’ ಈ ಪದದಲ್ಲಿ
ನಡೆದಿರುವ ಸಂಧಿಕಾರ್ಯ.
೧. ಜಸ್ತ್ವಸಂಧಿ ೨. ಅನುನಾಸಿಕ ಸಂಧಿ
೩. ವೃದ್ಧಿಸಂಧಿ ೪. ಯಣ್ ಸಂಧಿ
೩. ಯಣ್ ಸಂಧಿಗೆ ಉದಾಹರಣೆಯಾಗಿರುವ ಪದ.
೧. ಪಿತ್ರಾರ್ಜಿತ ೨. ಗುರೂಪದೇಶ
೩. ಮೈದೋರು .೪.
ಷಣ್ಮುಖ
೪. ’ಷಡಾನನ’ ಈ ಪದದಲ್ಲಿ ನಡೆದಿರುವ ಸಂಧಿಕಾರ್ಯ.
೧. ಗುಣಸಂಧಿ
೨. ವೃದ್ಧಿಸಂಧಿ
೩. ಜಸ್ತ್ವಸಂಧಿ ೪. ಆದೇಶಸಂಧಿ
೫. ’ಬೆಂಬತ್ತು’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
೧. ಗುಣಸಂಧಿ
೨. ವೃದ್ಧಿಸಂಧಿ
೩. ಜಸ್ತ್ವಸಂಧಿ
೪. ಆದೇಶಸಂಧಿ
೬. ’ಮಳೆಗಾಲ’ ಇಲ್ಲಿರುವ ಸಂಧಿ
೧. ಲೋಪಸಂಧಿ ೨. ಆಗಮಸಂಧಿ
೩. ಜಸ್ತ್ವಸಂಧಿ
೪. ಆದೇಶಸಂಧಿ
೭. ’ಮಹಾತ್ಮ’ ಇದು ಈ ಸಂಧಿಗೆ ಉದಾಹರಣೆಯಾಗಿದೆ.
೧. ಗುಣಸಂಧಿ
೨. ವೃದ್ಧಿಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೮. ’ಸೂರ್ಯೋದಯ’ ಇದು ಈ ಸಂಧಿಗೆ ಉದಾಹರಣೆ:
೧. ಗುಣಸಂಧಿ ೨. ವೃದ್ಧಿಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೯. ’ಏಕೈಕ’ ಇಲ್ಲಿರುವ ಸಂಧಿ:
೧. ಗುಣಸಂಧಿ ೨. ವೃದ್ಧಿಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೧೦. ’ದಿಗಂತ’ ಈ ಪದದಲ್ಲಿರುವ ಸಂಧಿ:
೧. ಗುಣಸಂಧಿ ೨. ವೃದ್ಧಿಸಂಧಿ
೩. ಜಸ್ತ್ವಸಂಧಿ ೪.
ಆದೇಶಸಂಧಿ
೧೧. ’ವನೌಷಧಿ’ ಇದರಲ್ಲಿರುವ
ಸಂಧಿ:
೧. ಗುಣಸಂಧಿ
೨. ವೃದ್ಧಿಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೧೨. ’ಜಗಜ್ಯೋತಿ’ ಪದದಲ್ಲಿರುವ
ಸಂಧಿ:
೧. ಶ್ಚುತ್ತ್ವ ೨. ಗುಣಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೧೩. ’ಪೊಗಲ್ವೇಳ್ಕುಂ’ ಪದದಲ್ಲಿರುವ ಸಂಧಿ;
೧. ಶ್ಚುತ್ತ್ವ ೨. ಗುಣಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೧೪. ’ಹೊಸಗಾಲ’ ಎಂಬುದು ಈ ಸಂಧಿಗೆ ಉದಾಹರಣೆ;
೧. ಶ್ಚುತ್ತ್ವ ೨. ಗುಣಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೧೫. ’ ಉನ್ಮಾದ’ ಪದದಲ್ಲಿರುವ ಸಂಧಿ;
೧. ಅನುನಾಸಿಕ ೨. ಗುಣಸಂಧಿ
೨. ಆದೇಶಸಂಧಿ ೪. ಆಗಮಸಂಧಿ
೧೬. ’ಜನೈಕ್ಯ’ ಪದದಲ್ಲಿರುವ
ಸಂಧಿ
೧. ಗುಣಸಂಧಿ
೨. ವೃದ್ಧಿಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೧೭. ’ಮಹರ್ಷಿ’ ಇದು ಈ ಸಂಧಿಗೆ ಉದಾಹರಣೆ:
೧. ಗುಣಸಂಧಿ ೨. ವೃದ್ಧಿಸಂಧಿ
೩. ಸವರ್ಣಧೀರ್ಘಸಂಧಿ ೪. ಆದೇಶಸಂಧಿ
೧೮. ಈ ಪದಗಳಲ್ಲಿ ಲೋಪಸಂಧಿಗೆ ಉದಾಹರಣೆ.
೧. ಮಗುವಿಗೆ ೨. ಹೊಸಗಾಲ
೩. ಏಕೈಕ ೪. ಊರುರು
೧೯. ’ಜಾತ್ಯಾತೀತ’ ಪದದಲ್ಲಿರುವ
ಸಂಧಿ.
೧. ಜಸ್ತ್ವಸಂಧಿ ೨. ಶ್ಚುತ್ವಸಂಧಿ
೩. ಗುಣಸಂಧಿ ೪. ಸವರ್ಣಧೀರ್ಘಸಂಧಿ
೨೦. ಜಗದೀಶ ಇದು ಯಾವ ಸಂಧಿಗೆ ಉದಾಹರಣೆ.
೧. ಲೋಪಸಂಧಿ ೨. ಗುಣಸಂಧಿ
೩. ಯಣ್ ಸಂಧಿ ೪.
ಸವರ್ಣಧೀರ್ಘಸಂಧಿ
೨೧. ’ ತಿಂಗಳಿನೂರು’ ಪದದಲ್ಲಿರುವ ಸಂಧಿ:
೧. ಲೋಪ ೨. ಆಗಮ
೩. ಆದೇಶ ೪. ಪ್ರಕೃತಿಭಾವ
೨೨. ’ಅತ್ಯವಸರ’ ಪದದಲ್ಲಿರುವ ಸಂಧಿ:
೧. ಗುಣಸಂಧಿ ೨. ವೃದ್ಧಿಸಂಧಿ
೩. ಯಣ್ ಸಂಧಿ ೪. ಆಗಮಸಂಧಿ
೨೩. ’ಮೈದೋರು’ ಪದವು ಈ ಸಂಧಿಗೆ ಉದಾಹರಣೆ:
೧. ಲೋಪ ೨. ಆದೇಶ
೩. ಆಗಮ ೪. ಗುಣ
೨೪. ’ಅತ್ಯಾದರ’ ಪದದಲ್ಲಿರುವ
ಸಂಧಿ.
೧. ಗುಣಸಂಧಿ ೨. ವೃದ್ಧಿಸಂಧಿ
೩. ಯಣ್ ಸಂಧಿ ೪. ಆಗಮಸಂಧಿ
೨೫. ’ತನ್ಮಯ’ ಪದದಲ್ಲಿರುವ
ಸಂಧಿ
೧. ಅನುನಾಸಿಕ ೨. ಶ್ಚುತ್ವ
೩. ವೃದ್ಧಿ ೪. ಯ ಕಾರಾಗಮ
೨೬. ’ಪ್ರಾಣಾಹುತಿ’ ಈ ಸಂಧಿಗೆ ಉದಾಹರಣೆ
೧. ಯಣ್ ೨. ಆದೇಶ
೩. ಸವರ್ಣದೀರ್ಘ ೪. ಆಗಮ
೨೭. ’ ಗತ್ಯಂತರ’ ಇದು ----- ಸಂಧಿ ಪದ
೧. ಗುಣ ೨.
ಸವರ್ಣದೀರ್ಘ
೩. ಯಣ್ ೪. ಆಗಮ
೨೮. ’ದಿಗ್ಬ್ರಮೆ’ ಇದು ಈ ಸಂಧಿಗೆ ಉದಾಹರಣೆ.
೧. ಗುಣಸಂಧಿ ೨. ಜಸ್ತ್ವಸಂಧಿ
೩. ಆದೇಶಸಂಧಿ ೪.
ಲೋಪಸಂಧಿ
೨೯. ’ಕಡುವೆಳ್ಪು’ ಇದು
ಈ ಸಂಧಿಗೆ ಉದಾಹರಣೆ
೧. ಗುಣಸಂಧಿ ೨. ವೃದ್ಧಿಸಂಧಿ
೩. ಯಣ್ ಸಂಧಿ ೪. ಆದೇಶಸಂಧಿ
೩೦. ’ಪೀಠೋಪಕರಣ’ ಇದು ಈ ಸಂಧಿಗೆ ಉದಾಹರಣೆ.
೧. ಸವರ್ಣದೀರ್ಘ ೨. ಗುಣ
೩. ಆದೇಶ ೪.
ವೃದ್ಧಿ
೩೧. ’ಜ್ಞಾನೋದಯ’ ಈ ಪದ ----- ಸಂಧಿಗೆ ಉದಾಹರಣೆ:
೧. ಆದೇಶ ೨. ಗುಣ
೩. ಆಗಮ ೪.
ಸವರ್ಣದೀರ್ಘ
೩೨. ’ಕೋಟ್ಯಧೀಶ್ವರ’ ಈ ಪದ ----- ಸಂಧಿಗೆ ಉದಾಹರಣೆ
೧. ಗುಣ ೨.
ಸವರ್ಣದೀರ್ಘ
೩. ಯಣ್ ೪. ಆಗಮ
೩೩. ’ಸನ್ಮಾನ’ ಪದವು ಈ ಸಂಧಿಗೆ
ಉದಾಹರಣೆ:
೧. ಗುಣಸಂಧಿ ೨. ಅನುನಾಸಿಕಸಂಧಿ
೩. ಯಣ್ ಸಂಧಿ ೪. ವೃದ್ಧಿಸಂಧಿ
೩೪. ’ಸದ್ವಂಶ’ ಪದವು ಈ ವ್ಯಾಕರಣಾಂಶಕ್ಕೆ ಉದಹರಣೆ:
೧. ಗುಣಸಂಧಿ ೨. ಆದೇಶಸಂಧಿ
೩. ಜಸ್ತ್ವಸಂಧಿ ೪. ವೃದ್ಧಿಸಂಧಿ
ಲೇಖನ ಚಿಹ್ನೆಗಳು
೧. ಒಂದು ಪೂರ್ಣಕ್ರಿಯೆಯಿಂದ
ಕೂಡಿದ ವಾಕ್ಯದ ಕೊನೆಯಲ್ಲಿ
ಇರಬೇಕಾದ ಲೇಖನ ಚಿಹ್ನೆ.
೧. ಅಲ್ಪವಿರಾಮ ೨. ಪೂರ್ಣವಿರಾಮ
೩. ಅರ್ಧವಿರಾಮ ೪. ಪ್ರಶ್ನಾರ್ಥಕ
೨. ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ
ಚಿಹ್ನೆಯನ್ನು ಬಳಸಲಾಗುತ್ತದೆ.
೧. ಉದ್ಧರಣ ೨. ಭಾವಸೂಚಕ
೩. ಅಲ್ಪವಿರಾಮ ೪. ಆವರಣ
೩. ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದು;ಖ ಮುಂತಾದ
ಭಾವನೆಗಳನ್ನು ಸೂಚಿಸುವ
ಪದಗಳ ಮಂದೆ ಈ ಚಿಹ್ನೆಯನ್ನು
ಬಳಸಲಾಗುವುದು.
೧. ವಾಕ್ಯವೇಷ್ಟನ ೨. ಉದ್ಧರಣ
೨. ಆವರಣ ೪.
ಭಾವಸೂಚಕ
೪. ಪಾರಿಭಾಷಿಕ ಪದಗಳನ್ನು
ಬಳಸುವಾಗ, ಅನ್ಯಭಾಷೇಯ ಪದಗಳನ್ನು
ಬಳಸುವಾಗ ಪ್ರಮುಖ
ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನ್ನು
ಬಳಸಲಾಗುವುದು.
೧. ಉದ್ದರಣ ೨. ಭಾವಸೂಚಕ
೩. ವಾಕ್ಯವೇಷ್ಟನ ೪.
ಅಲ್ಪವಿರಾಮ
೫. ಅನೇಕ ಉಪವಾಕ್ಯಗಳು
ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾದಾಗ
ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸುವರು.
೧. ಅಲ್ಪವಿರಾಮ ೨. ಪೂರ್ಣವಿರಾಮ
೩. ಅರ್ಧವಿರಾಮ ೪. ಪ್ರಶ್ನಾರ್ಥಕ
೬. ಒಂದು ಅಭಿಪ್ರಾಯದ ವಿವರಣೆ
ಮುಂದೆ ತಿಳಿಸಿದಂತೆ ಇದೆ ಎಂದು
ತೋರಿಸುವ ಸಂದರ್ಭದಲ್ಲಿ
ಈ ಚಿಹ್ನೆಯನ್ನು ಬಳಸಲಾಗುತ್ತದೆ.
೧. ಆವರಣ ಚಿಹ್ನೆ ೨. ವಿವರಣಾತ್ಮಕ
೩. ಉದ್ಧರಣ ೪. ಭಾವಸೂಚಕ
೭. ಮಡಿಯಬೇಕಾದರೆ ಮಾಡೆಯೇ
ಮಡಿಯುತ್ತೇನೆ. ಇಲ್ಲಿರಬೇಕಾದ
ಲೇಖನ ಚಿಹ್ನೆ.
೧. ವಾಕ್ಯವೇಷ್ಟನ ೨. ಭಾವಸೂಚಕ
೩. ಪ್ರಶ್ನಾರ್ಥಕ ೪. ಪೂರ್ಣವಿರಾಮ
೮. ತಾವು ಕಡಿಮೆ ಮಾತನಾಡಿದ್ದೀರಿ
; ಹೆಚ್ಚು ಕೆಲಸ ಮಾಡಿದ್ಧೀರಿ
ಇಲ್ಲಿ ಬಳಸಿರುವ ಲೇಖನ
ಚಿಹ್ನೆ.
೧. ಅಲ್ಪವಿರಾಮ ೨. ಪೂರ್ಣವಿರಾಮ
೩. ಅರ್ಧವಿರಾಮ ೪. ಪ್ರಶ್ನಾರ್ಥಕ
೯. ಸಂಬೋಧನೆಯ ಮುಂದೆ ಹಾಗೂ
ಕರ್ತೃ, ಕರ್ಮ, ಕ್ರಿಯಾಪದಗಳಿಗೆ
ಬೇರೆ ಬೇರೆ ವಿಶೇಷಣಗಳು
ಬಂದಾಗ ಕೊನೆಯ ವಿಶೇಷಣವನ್ನು
ಬಿಟ್ಟು ಉಳಿದವುಗಳ
ಮುಂದೆ ಈ ಚಿಹ್ನೆಯನ್ನು ಹಾಕಬೇಕು.
೧. ಪೂರ್ಣವಿರಾಮ ೨. ಅಲ್ಪವಿರಾಮ
೩. ಅರ್ಧವಿರಾಮ ೪. ಉದ್ಧರಣ
೧೦. ದಶರಥ ಯಾರು - ಈ ವಾಕ್ಯದ ಕೊನೆಯಲ್ಲಿರಬೇಕಾದ
ಲೇಖನ ಚಿಹ್ನೆ
೧. ಭಾವಸೂಚಕ ೨. ಪ್ರಶ್ನಾರ್ಥಕ
೩. ಅಲ್ಪವಿರಾಮ ೪. ಅರ್ಧವಿರಾಮ
೧೨. ಪ್ರಶ್ನೆರೂಪದ
ಪದ ಮತ್ತು ವಾಕ್ಯಗಳ ಮುಂದೆ ಈ
ಚಿಹ್ನೆಯನ್ನು ಬಳಸಲಾಗುವುದು.
೧. ಅಲ್ಪವಿರಾಮ
೨. ಪೂರ್ಣವಿರಾಮ
೩. ಅರ್ಧವಿರಾಮ ೪. ಪ್ರಶ್ನಾರ್ಥಕ
೧೩. ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ
ಪದವನ್ನೋ ವಾಕ್ಯವನ್ನೋ
ಹೇಳುವಾಗ ಈ ಚಿಹ್ನೆಯನ್ನು
ಬಳಸಲಾಗುತ್ತದೆ.
೧. ಆವರಣ ಚಿಹ್ನೆ ೨.
ವಿವರಣಾತ್ಮಕ
೩. ಉದ್ಧರಣ ೪. ಭಾವಸೂಚಕ
ತತ್ಸಮ-ತದ್ಭವ
೧. ’ಬಿನ್ನಹ’ ಪದದ ತತ್ಸಮರೂಪವಿದು.
೧. ಆಲಾಪನೆ ೨.
ಆಜ್ಞಾಪನೆ
೩. ಪ್ರಲಾಪನೆ ೪. ವಿಜ್ಞಾಪನೆ
೨. ಸಂದೇಹ ಪದದ ತದ್ಭವ ರೂಪ:
೧. ಸಂದೆಯ ೨. ಸಂಶಯ
೩. ಅನುಮಾನ ೪. ಸನ್ಮಾನ
೩. ’ವ್ಯಾಪಾರಿ’ ತತ್ಸಮ ಪದದ ತದ್ಭವ ರೂಪ:
೧. ಬೇಹಾರಿ ೨. ಬಹಾರಿ
೩. ಬೇಹರೀ ೪. ಬೇಪಾರಿ
೪. ’ವ್ಯಯ’ ಇದರ ತದ್ಭವ ರೂಪ:
೧. ವೀಯ ೨. ವ್ಯತ್ಯಯ
೩. ಬೀಯ ೪. ಬಿತ್ಯಯ
೫. ’ಕುಠಾರ’ - ಪದದ ತದ್ಭವ ರೂಪ
೧. ಕೊಡಲಿ ೨. ಕುಠೀರ
೩. ಕೂಡು ೪. ಕುಂಡಲಿ
.೬. ’ಅರ್ಕ’ - ಪದದ ತದ್ಭವ ರೂಪ
೧. ಸೂರ್ಯ ೨. ಅಕ್ಷರ
೩. ಎಕ್ಕ ೪. ಚಂದ್ರ
೭. ’ಬಂಜೆ’ ಪದದ ತತ್ಸಮ ರೂಪ:
೧. ವಂದ್ಯಾ ೨.
ಭಜೆ
೩. ಪಂಜು ೪. ವಂಚು
೮. ಮುಖಶಾಲೆ’ ಪದದ ತದ್ಭವ
ರೂಪ:
೧. ಮೊಗಶಾಲೆ ೨. ಮಕಸಾಲೆ
೩. ಮೊಕಸಾಲೆ ೪.
ಮಗಸಾಲೆ
೯. ’ದಿಟ್ಟಿ’ ಈ ಪದದ ತತ್ಸಮ ರೂಪ
ಇದು:
೧. ದೃಷ್ಟಿ ೨.
ದೃಷ್ಠಿ
೩. ದುಬ್ಬಿ ೪. ದಿಬ್ಬ
೧೦. ’ತಪಸ್ವಿ’ ಪದದ ತದ್ಭವ ರೂಪ:
೧. ತವಸಿ ೨. ತಪಸ್ವಿ
೩. ತಪಸಿ ೪. ತವಸ
೧೧. ’ ಕೋಗಿಲೆ’ ಪದದ ತತ್ಸಮ ರೂಪ:
೧. ಕಾಗೆ ೨. ಕೊಕಿಲ
೩. ಕೋಕಿಲಾ ೪. ಕೋಗಿಲೆ
೧೨. ’ಕಾರ್ಯ’ ಪದದ ತದ್ಭವ ರೂಪ:
೧. ಕಜ್ಜ ೨. ಕಾಯ
೩. ಕಾರ್ಯ ೪. ಕಬ್ಬ
ವಿಭಕ್ತಿ ಪ್ರತ್ಯಯ
೧. ’ತಂದೆಯಪ್ಪುದಂ’- ಪದವು
ಈ ವಿಭಕ್ತಿಯಲ್ಲಿದೆ.
೧. ಪ್ರಥಮಾ ೨.
ದ್ವಿತೀಯಾ
೩. ಚತುರ್ಥಿ ೪. ತೃತಿಯಾ
೨. ಹಳೆಗನ್ನಡದ ಪ್ರಥಮಾ
ವಿಭಕ್ತಿ ಪ್ರತ್ಯಯ ಇದು.
೧. ಮ್ ೨. ಅಂ
೩. ಇಂ ೪. ಅತ್ತಣಿಂ
೩. ತೃತೀಯ ವಿಭಕ್ತಿ ಪ್ರತ್ಯಯದ ಕಾರಕಾರ್ಥ.
೧. ಸಂಪ್ರದಾನ ೨. ಸಂಬಂಧ
೩. ಅಪಾದಾನ ೪. ಕರಣಾರ್ಥ
೪. ಇದು ಹಳೆಗನ್ನಡದ ಸಪ್ತಮೀ ವಿಭಕ್ತಿ ಪ್ರತ್ಯಯ:
೧. ಮ್ ೨. ಅಂ
೩. ಒಳ್ ೪. ಅತ್ತಣಿಂ
೫. ’ಕೌರವನಿಂದ’ ಈ ಪದದಲ್ಲಿರುವ ವಿಭಕ್ತಿ:
೧. ಪ್ರಥಮಾ ೨. ದ್ವಿತೀಯಾ
೩. ತೃತೀಯಾ ೪. ಚತುರ್ಥೀ
೬. ’ರಾಣಿಯತ್ತಣಿಂ’ ಇಲ್ಲಿ ಬರುವ ವಿಭಕ್ತಿ ಪ್ರತ್ಯಯ
೧. ಪಥಮಾ ೨. ಪಂಚಮೀ
೩. ಚತುರ್ಥಿ ೪. ತೃತಿಯಾ
೭. ’ಮನೆಯಲ್ಲಿ’ ಇಲ್ಲಿರುವ ವಿಭಕ್ತಿ ಪ್ರತ್ಯಯ
೧. ಷಷ್ಠಿ ವಿಭಕ್ತಿ ೨. ಸಪ್ತಮೀ ವಿಭಕ್ತಿ
೩. ಚತುರ್ಥಿ
ವಿಭಕ್ತಿ ೪. ತೃತಿಯಾ ವಿಭಕ್ತಿ
೮. ’ಸಪ್ತಮಿ’ ವಿಭಕ್ತಿಯ ಕಾರಕಾರ್ಥ
೧. ಕರ್ತ್ರಾರ್ಥ ೨. ಕರ್ಮಾರ್ಥ
೩. ಅಧಿಕರಣ ೪. ಸಂಪ್ರದಾನ
೯. ದ್ವಿತೀಯಾ ವಿಭಕ್ತಿ ಕಾರಕಾರ್ಥ:
೧. ಕರ್ತ್ರಾರ್ಥ ೨. ಕರ್ಮಾರ್ಥ
೩. ಅಧಿಕರಣ ೪. ಸಂಪ್ರದಾನ
೧೦. ಹಳಗನ್ನಡದ ಪಂಚಮಿ ವಿಭಕ್ತಿ
ಪ್ರತ್ಯಯ:
೧. ಮ್ ೨. ಅಂ
೩. ಒಳ್ ೪. ಅತ್ತಣಿಂ
೧೧. ಪಂಚಮಿ ವಿಭಕ್ತಿಯ ಕಾರಕಾರ್ಥ:
೧. ಸಂಪ್ರದಾನ ೨. ಸಂಬಂಧ
೩. ಅಪಾದಾನ ೪. ಕರಣಾರ್ಥ
೧೨. ಹಳಗನ್ನಡದ ದ್ವಿತೀಯ ವಿಭಕ್ತಿ
ಪ್ರತ್ಯಯ:
೧. ಮ್ ೨. ಅಂ
೩. ಒಳ್ ೪. ಅತ್ತಣಿಂ
೧೩. ’ಕೆರ್ಪುಗಳೊಳ್’ ಪದವು
ಈ ವಿಭಕ್ತಿಯಲ್ಲಿದೆ:
೧. ಸಪ್ತಮಿ ೨.
ಷಷ್ಠಿ
೩. ಪಂಚಮೀ ೪. ಚತುರ್ಥಿ
೧೪. ’ಲೋಕದಿಂ’ ಪದವು ಈ ವಿಭಕ್ತಿಯಲ್ಲಿದೆ.
೧. ಪ್ರಥಮ ೨.
ದ್ವಿತೀಯ
೩. ತೃತೀಯ ೪. ಸಪ್ತಮೀ
೧೫. ಈ ಕೆಳಗಿನ ನಾಮಪದಗಳಲ್ಲಿ ಪಂಚಮೀ ವಿಭಕ್ತಿ ಹೊಂದಿರುವ ಪದ.
೧. ಮರದಿಂದ ೨. ಜಲದಿಂ
೩. ಮರದತ್ತಣಿಂ ೪. ರಾಯಂಗೆ
೧೬. ’ಉರ್ವಿಯೊಳ್’ ಕೌಸಲ್ಯೆ ಪಡೆದ ಕುವರಂ ರಾಮ - ಗೆರೆ ಎಳೆದ
ಪದದಲ್ಲಿರುವ ವಿಭಕ್ತಿ:
೧. ದ್ವಿತಿಯ ೨. ಪಂಚಮೀ
೩. ಪ್ರಥಮ ೪. ಸಪ್ತಮೀ
೧೭. ಇವುಗಳಲ್ಲಿ ತೃತೀಯಾ ವಿಭಕ್ತಿಯುಳ್ಳ ಪದವಿದು:
೧. ಗುರುನತ್ತಣಿಂ ೨. ದ್ರೋಣಂ
೩. ಕುಂಭಸಂಭವನಂ ೪. ಚಟ್ಟರಿಂ
೧೮. ಹಳಗನ್ನಡ ಸಪ್ತಮೀ ವಿಭಕ್ತಿ
ಪ್ರತ್ಯಯಕ್ಕೆ ಉದಾಹರಣೆಯಾಗಿದೆ.
೧. ಹೊಲದಲ್ಲಿ ೨. ಗಾಂಡಿವಿಯೊಳ್
೩. ಮನೆಯಿಂದ ೪. ಬೇಗ ಬೇಗ
ನಾಮಪದಗಳು
೧. " ಪಶ್ಚಿಮ ಘಟ್ಟದಲ್ಲಿ
ಹಲವು ವಿಶೇಷವಾದ ಮರಗಳಿವೆ"
ಈ ವಾಕ್ಯದಲ್ಲಿರುವ
ಪರಿಣಾಮವಾಚಕವಿದು.
೧. ಹಲವು ೨. ವಿಶೇಷ
೩. ಪಶ್ಚಿಮ ೪. ಮರ
೨. ’ಪೂಜಾರಿ’ ಪದವು ನಾಮಪದದ
ಈ ಗುಂಪಿಗೆ ಸೇರಿದೆ.
೧. ರೂಢನಾಮ ೨. ಅನ್ವರ್ಥನಾಮ
೩. ಅಂಕಿತನಾಮ ೪. ಭಾವನಾಮ
೩. ಹನ್ನೆರಡನೆಯ ಎಂಬುದು:
೧. ಪ್ರಶ್ನಾರ್ಥಕ ೨. ಪುರುಷವಾಚಕ
೩. ಸಂಖ್ಯೇಯವಾಚಕ ೪. ಸಂಖ್ಯಾವಾಚಕ
೪. ಇದು ಅನ್ವರ್ಥನಾಮಪದಕ್ಕೆ
ಉದಾಹರಣೆಯಾಗಿದೆ:
೧. ವ್ಯಾಪಾರಿ ೨. ಹುಡುಗ
೩. ನದಿ ೪. ಭೀಮ
೫. ’ಎಷ್ಟೊಂದು ಜನರು ಅಲ್ಲಿ
ನಿಂತಿದ್ಧಾರೆ.’ ಈ ವಾಕ್ಯದಲ್ಲಿನ
ಪರಿಣಾಮವಾಚಕ ವಿಶೇಷಣ.
೧. ಎಷ್ಟೊಂದು ೨. ಜನರು
೩. ಅಲ್ಲಿ ೪. ನಿಂತಿದ್ಧಾರೆ
೬. ’ಪರ್ವತ’ ಇದು ----- ಗೆ ಉದಾಹರಣೆ.
೧. ರೂಢನಾಮ ೨. ಅನ್ವರ್ಥನಾಮ
೩. ಅಂಕಿತನಾಮ ೪. ನಾಮಪದ
೭. ಇವುಗಳಲ್ಲಿ ಅನ್ವರ್ಥನಾಮಪದಕ್ಕೆ
ಉದಾಹರಣೆ ಇದು:
೧. ಬೆಟ್ಟ ೨. ವಿದ್ಯಾರ್ಥಿ
೩. ಶಂಕರ ೪. ನದಿ
೮. ಇವುಗಳಲ್ಲಿ ಅನ್ವರ್ಥನಾಮಪದಕ್ಕೆ
ಉದಾಹರಣೆ:
೧. ಬೆಟ್ಟ ೨. ರಾಮ
೩. ವಿದ್ವಾಂದ ೪. ಅವನು
೯. ’ಎಂಟೂವರೆ ಮೊಳ’ ಈ ನಾಮವಾಚಕ ಪದವಾಗಿದೆ.
೧. ಗುಣವಾಚಕ ೨.
ಪರಿಮಾಣವಾಚಕ
೩. ಸಂಖ್ಯಾವಾಚಕ ೪. ಸಂಖ್ಯೇಯವಾಚಕ
೧೦. ಇವುಗಳಲ್ಲಿ ಅನ್ವರ್ಥನಾಮ
ಪದ
೧. ಮನುಷ್ಯ ೨.
ವಿಜ್ಞಾನಿ
೩. ಕರ್ಮಧಾರಯ ೪. ದೊಡ್ಡದು
ಅನ್ಯದೇಶ್ಯಪದಗಳು
೧. ಕೊಟ್ಟಿರುವ ಪದಗಳಲ್ಲಿ ಪೋರ್ಚುಗಿಸ್ ಪದ.
೧. ತಾಲೂಕು ೨.
ಕಾಗದ
೩. ಮೇಜು ೪.
ಗಲೀಜು
೨. ಪೋರ್ಚುಗಿಸ್ ಭಾಷೆಯಿಂದ
ಕನ್ನಡಕ್ಕೆ ಬಂದಿರುವ ಪದ:
೧. ಸಾಬೂನು ೨. ಜಮೀನು
೩. ತಾಲ್ಲೂಕು ೪. ಸಲಾಮು
೩. ಈ ಕೆಳಗಿನ ಪದಗಳಲ್ಲಿ
ಪೋರ್ಚುಗೀಸ್ ಪದ ಯಾವುದು?
೧. ತಂಬಾಕು ೨. ಕಾಲೇಜ್
೩. ಅರ್ಜಿ ೪. ಕಾರು
೪. ’ಇನಾಮು ’ ಇದು ಈ ಭಾಷೆಯಿಂದ ಬಂದಿದೆ.
೧. ಇಂಗ್ಲೀಷ್ ೨. ರೋಮನ್.
೨. ಅರಬ್ಬಿ ೪. ಫಾರ್ಸಿ
೫. ’ದವಾಖಾನೆ’ ಪದವು ಈ
ಭಾಷೆಯಿಂದ ಕನ್ನಡಕ್ಕೆ ಬಂದಿದೆ.
೧. ಪರ್ಷಿಯನ್ ೨. ಉರ್ದು
೩. ಗ್ರೀಕ್ ೪. ಅರಬ್ಬೀ
೬. ಹುಕುಂ- ಪದವು ಯಾವ
ಭಾಷೆಯಿಂದ ಕನ್ನಡಕ್ಕೆ ಬಂದಿದೆ.
೧. ಗ್ರೀಕ್ ೨. ಉರ್ದು
೩. ಸಂಸ್ಕೃತ ೪. ಹಿಂದೂಸ್ಥಾನಿ
೭. ಇವುಗಳಲ್ಲಿ ಪಾರ್ಸಿ
ಭಾಷೆಯಿಂದ ಬಂದಿರುವ ಪದ:
೧. ಅಮಾನತು ೨. ತಂಬಾಕು
೩. ಅರ್ಜಿ ೪. ಚೌಕಾಷಿ
೮. ’ಸಲಾಮು’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
೧. ಫಾರ್ಸಿ ೨. ಹಿಂದೂಸ್ಥಾನಿ
೩. ಉರ್ದು ೪. ಅರಬ್ಬೀ
೯. ’ಕಾರ್ಖಾನೆ’ ಪದವು
ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
೧. ಉರ್ದು ೨. ಅರಬ್ಬೀ
೩. ಫಾರ್ಸಿ ೪.
ಹಿಂದೂಸ್ಥಾನಿ
೧೦. ’ತರಬೇತು’ ಈ ಪದವು:
೧. ಹಿಂದೂಸ್ಥಾನಿ ೨.
ಉರ್ದು
೩. ಅರಬ್ಬೀ ೪. ಇಂಗ್ಲೀಷ್
೧೧. ’ಕಿಮ್ಮತ್ತು’ ಈ ಪದವು:
೧. ಪರ್ಷಿಯನ್ ೨. ಉರ್ದು
೩. ಗ್ರೀಕ್ ೪. ಅರಬ್ಬೀ
೧೨. ’ಅಜಮಾಯಿಸಿ’ ಪದವು
ಕನ್ನಡಕ್ಕೆ ಈ ಭಾಷೆಯಿಂದ ಬಂದಿದೆ.
೧. ಉರ್ದು ೨. ಅರಬ್ಬೀ
೩. ಫಾರ್ಸಿ ೪. ಹಿಂದೂಸ್ಥಾನಿ
ವಾಕ್ಯಗಳು
೧. "ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ ವಿಶ್ವೇಶ್ವರಯ್ಯ ಅವರ
ಸಾಧನೆಯ ಕಿರೀಟಕ್ಕೆ
ಮತ್ತೊಂದು ಗರಿಯನ್ನು ಸೇರಿಸಿತು"
ಈ ವಾಕ್ಯವು
೧. ನಿಷೇಧಾರ್ಥಕ ವಾಕ್ಯ ೨. ಮಿಶ್ರವಾಕ್ಯ
೩. ಸಂಯೋಜಿತ ವಾಕ್ಯ ೪. ಸಾಮಾನ್ಯವಾಕ್ಯ
೨. ಸ್ವತಂತ್ರವಾಗಿ ನಿಲ್ಲಬಲ್ಲ ಅನೇಕ ಅನೇಕ ಉಪವಾಕ್ಯಗಳೊಡನೆ
ಒಂದು ಪೂರ್ಣಾಭಿಪ್ರಾಯದ
ವಾಕ್ಯವಾಗಿದ್ದರೆ ಅದು:
೧. ಸಾಮಾನ್ಯವಾಕ್ಯ ೨. ಮಿಶ್ರವಾಕ್ಯ
೩. ಸಂಯೋಜಿತ ವಾಕ್ಯ ೪. ಸಂಬಂಧವಾಕ್ಯ
೩. ಒಂದು ಪೂರ್ಣಕ್ರಿಯಾಪದದೊಂದಿಗೆ
ಸ್ವತಂತ್ರವಾಗಿರುವ ವಾಕ್ಯವನ್ನು
ಹೀಗೆಂದು ಕರೆಯುತ್ತಾರೆ.
೧. ಸಾಮಾನ್ಯವಾಕ್ಯ ೨. ಮಿಶ್ರವಾಕ್ಯ
೩. ಸಂಯೋಜಿತ ವಾಕ್ಯ ೪. ಸಂಬಂಧವಾಕ್ಯ
೪. " ಕಾರವಾರದಲ್ಲಿ
ಮಲೇರಿಯಾ ವ್ಯಾಪಕವಾಗಿ ಹಬ್ಬಿತ್ತು" ಈ
ವಾಕ್ಯವು:
೧. ಸಂಯೋಜಿತವಾಕ್ಯ ೨. ಪ್ರಶ್ನಾರ್ಥಕ ವಾಕ್ಯ
೩. ಮಿಶ್ರವಾಕ್ಯ ೪. ಸಾಮಾನ್ಯ ವಾಕ್ಯ
೫. ಹುಡುಗರು ಶಾಲೆಗೆ ಹೋದರು; ಆದರೆ ಅಲ್ಲಿ ಅವರು ಓದಲಿಲ್ಲ.
ಈ ವಾಕ್ಯವು
೧. ಸಾಮಾನ್ಯವಾಕ್ಯ ೨.
ಮಿಶ್ರವಾಕ್ಯ
೩. ಸಂಯೋಜಿತ ವಾಕ್ಯ ೪. ಸಂಬಂಧವಾಕ್ಯ
೬. ಕೇಂದ್ರ ಲೋಕ ಸೇವಾ
ಆಯೋಗವು ವರ್ಷಕ್ಕೆ ಎರಡು ಭಾರಿ
ನಡೆಸುವ ಎನ್. ಡಿ.
ಎ. ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು
ಹಾಗೂ ಅವರು ಸಂದರ್ಶನದಲ್ಲಿ
ಆಯ್ಕೆಯಾಗಬೇಕು- ಈ ವಾಕ್ಯವು
೧. ಸಾಮಾನ್ಯವಾಕ್ಯ ೨. ಮಿಶ್ರವಾಕ್ಯ
೩. ಸಂಯೋಜಿತ ವಾಕ್ಯ ೪. ಸಂಬಂಧವಾಕ್ಯ
೭. ಕಾರವಾರದಲ್ಲಿ ಮಲೇರಿಯಾ
ಹಬ್ಬಿತ್ತು; ಆದ್ದರಿಂದ ವೀರೀಶ್ವರಪಾಠಕ್
ಅವರು ಮಲೇರಿಯಾದಿಂದ
ಬಳಲಬೇಕಾಯಿತು. ಈ ವಾಕ್ಯವು
೧. ಸಾಮಾನ್ಯವಾಕ್ಯ ೨.
ಮಿಶ್ರವಾಕ್ಯ
೩. ಸಂಯೋಜಿತ ವಾಕ್ಯ ೪. ಸಂಬಂಧವಾಕ್ಯ
ತದ್ಧಿತಾಂತಗಳು
೧. "ನವೀನ್ ತಂದೆ
ತಾಯಿಗಳು ಮಗನನ್ನು ಶಾಲೆಯವರೆಗೆ ಕರೆತಂದು
ಬಿಟ್ಟರು"
- ಈ ವಾಕ್ಯದಲ್ಲಿರುವ ತದ್ಧಿತಾಂತ ಅವ್ಯಯ ಪದ
೧. ಮಗನನ್ನು ೨. ಶಾಲೆಯವರೆಗೆ
೩. ಕರೆತಂದು ೪. ಬಿಟ್ಟರು
೨. ಬಳೆಗಾರ ಎಂಬುದು ಈ ರೀತಿಯ ಪದವಾಗಿದೆ.
೧. ತದ್ಧಿತಾಂತ ೨. ತದ್ಧಿತ ಪ್ರತ್ಯಯ
೩. ತದ್ಧಿತಾಂತ ಭಾವನಾಮ ೪. ತದ್ಧಿತಾಂತನಾಮ
೩. ಜಾಣತನ ಎಂಬುದು ವ್ಯಾಕರಣಾಂಶದ
ಈ ಗುಂಪಿಗೆ ಸೇರಿದೆ.
೧. ತದ್ಧಿತಾಂತ ೨. ತದ್ಧಿತ ಪ್ರತ್ಯಯ
೩. ತದ್ಧಿತಾಂತ ಭಾವನಾಮ ೪. ತದ್ಧಿತಾಂತನಾಮ
೪. ಇವುಗಳಲ್ಲಿ ತದ್ಧಿತಾಂತ
ಭಾವನಾಮಕ್ಕೆ ಉದಾಹರಣೆ.
೧. ಸಿರಿತನ ೨.
ಕನ್ನಡಿಗ
೩. ನಿನಗಾಗಿ ೪. ಬಳೆಗಾರ್ತಿ
೫. ’ಕಪ್ಪು’ ಪದವು ಉದಾಹರಣೆಯಾಗಿರುವ
ವ್ಯಾಕರಣಾಂಶ:
೧. ತದ್ಧಿತಾಂತ ೨. ತದ್ಧಿತ ಪ್ರತ್ಯಯ
೩. ತದ್ಧಿತಾಂತ ಭಾವನಾಮ ೪. ತದ್ಧಿತಾಂತನಾಮ
೬. ’ಕನ್ನಡತಿ’ ಇಲ್ಲಿ
ಬಳಸಲಾಗಿರುವ ವ್ಯಾಕರಣ ರೂಪ:
೧. ತದ್ಧಿತಾಂತ ೨. ತದ್ಧಿತ ಪ್ರತ್ಯಯ
೩. ತದ್ಧಿತಾಂತ ಭಾವನಾಮ ೪. ತದ್ಧಿತಾಂತನಾಮ
೭. ಇವುಗಳಲ್ಲಿ ತದ್ಧಿತಾಂತ
ಭಾವನಾಮಕ್ಕೆ ಉದಾಹರಣೆ:
೧. ಬಳೆಗಾರ ೨. ಜಾಣತನ
೩. ಚಂದ್ರನಂತೆ ೪. ನೀನಗಾಗಿ
೮. ಇವುಗಳಲ್ಲಿ ತದ್ಧಿತಾಂತ
ಅವ್ಯಯಕ್ಕೆ ಉದಾಹರಣೆ:
೧. ಸಿರಿವಂತ ೨.
ಸಿರಿತನ
೩. ಸಿರಿಗಾಗಿ ೪. ಸಿರಿ
೯. ಪೆರ್ಮೆ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ.
೧. ತದ್ಧಿತಾಂತ ೨. ತದ್ಧಿತ ಪ್ರತ್ಯಯ
೩. ತದ್ಧಿತಾಂತ ಭಾವನಾಮ ೪. ತದ್ಧಿತಾಂತನಾಮ
೧೦. ’ಬಡತನ’ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ.
೧. ತದ್ಧಿತಾಂತ ೨. ತದ್ಧಿತ ಪ್ರತ್ಯಯ
೩. ತದ್ಧಿತಾಂತ ಭಾವನಾಮ ೪. ತದ್ಧಿತಾಂತನಾಮ
೧೧. ’ನನಗೋಸ್ಕರ"ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
೧. ತದ್ಧಿತಾಂತ ೨. ತದ್ಧಿತ ಪ್ರತ್ಯಯ
೩. ತದ್ಧಿತಾಂತ ಅವ್ಯಯ ೪. ತದ್ಧಿತಾಂತನಾಮ
೧೨. ’ಕಪ್ಪು’ ಈ ಪದದವ್ಯಾಕರಣ
ವಿಶೇಷ-----
೧. ಕೃದಂತನಾಮ ೨. ಕೃದಂತ ಭಾವನಾಮ
೩. ತದ್ಧಿತಾಂತ ಭಾವನಾಮ ೪. ತದ್ಧಿತಾಂತ
೧೩. ’ಹೂವಾಡಿಗ’ ಈ ಪದದಲ್ಲಿರುವ ತದ್ಧಿತ ಪ್ರತ್ಯಯ:
೧. ಇಗ ೨. ವಾಡಿಗ
೩. ಡಿಗ ೪. ಅಡಿಗ
೧೪. ತದ್ಧಿತಾಂತ ಅವ್ಯಯಕ್ಕೆ
ಉದಾಹರಣೆಯಾದ ಪದವಿದು:
೧. ಜಾಣತನ ೨. ಕನ್ನಡತಿ
೩. ಶಾಲೆಯವರೆಗೆ ೪. ಉಡುಗೆ
ಕ್ರಿಯಾಪದ
೧. ಅಕರ್ಮಕ ಧಾತುಗಳಿಗೆ
ಉದಾಹರಣೆ
೧. ಕೊಡು ೨. ಬಿಡು
೩. ಓಡು ೪. ನಾಡು
೨. ’ ಮಾಡಲಿ’ ಎಂಬುದು ಈ ಕ್ರಿಯಾರೂಪಕ್ಕೆ ಸೇರುತ್ತದೆ.
೧. ಸಂಭವನಾರ್ಥಕ ೨. ವಿದ್ಯರ್ಥಕ
೩. ನಿಷೇಧಾರ್ಥಕ ೪ ಅಕರ್ಮಕ
೩. ’ಓದು’ ಪದದ ಸಂಭಾವನಾರ್ಥಕ ರೂಪವಿದು:
೧. ಓದರು ೨. ಓದಿಯಾರು
೩. ಓದಲಿ ೪. ಓದೋಣ
೪. ’ ರಾಮನು ಮಾವಿನ ಹಣ್ಣನ್ನು
ತಿಂದನು’ ಇದರಲ್ಲಿನ
ಕ್ರಿಯಾಪದವನ್ನು ಕಂಡುಹಿಡಿಯಿರಿ.
೧. ರಾಮನು ೨. ಮಾವಿನ
೩. ಹಣ್ಣನ್ನು ೪. ತಿಂದನು
೫. ’ ರಾಣಿಯು ಬಹಳ ಸೊಗಸಾಗಿ
ಹಾಡಿದಳು’ ಈ ವಾಕ್ಯದಲ್ಲಿರುವ
ಕ್ರಿಯಾಪದ:
೧. ರಾಣಿಯು ೨.
ಬಹಳ
೩. ಸೊಗಸಾಗಿ ೪. ಹಾಡಿದಳು
೬. ’ಓಟ’ ಇದರ ಧಾತು:
೧. ಓಡು ೨. ಓಡಾಟ
೩. ಒಡನಾಟ ೪. ಓಡುತ್ತಾ
೭. ಪ್ರಾಣಿಗಳು ಬರಗಾಲದಲ್ಲಿ
ಸ್ವಲ್ಪ ಮೇವನ್ನಾದರೂ ತಿನ್ನಲಿ ಎಂದು
ಜನರು ಹೋರಾಡಿದರು.
ಗೆರೆ ಎಳೆದ ಪದದ ಕ್ರಿಯಾರೂಪ
೧. ಸಂಭವನಾರ್ಥಕ ೨.
ವಿದ್ಯರ್ಥಕ
೩. ನಿಷೇಧಾರ್ಥಕ ೪
ಅಕರ್ಮಕ
೮. ಇವುಗಳಲ್ಲಿ ಸಂಭವನಾರ್ಥಕ
ಕ್ರಿಯಾಪದ:
೧. ಬಂದಾನು ೨. ಬಾರನು
೩. ಬಾ ೪. ಬರುವನು
೯. ಕೆಳಗಿನವುಗಳಲ್ಲಿ ವಿದ್ಯರ್ಥಕ
ಕ್ರಿಯಾಪದ:
೧. ಬಾರನು ೨.
ಮಾಡಲಿ
೩. ಹಾಡಿಯಾನು ೪. ನೋಡಳು
೧೦. ಇವುಗಳಲ್ಲಿ ನಿಷೇಧಾರ್ಥಕ ಕ್ರಿಯಾರೂಪಕ್ಕೆ ಉದಾಹರಣೆ:
೧. ಹಾಡಲಿ ೨. ಹಾಡಿಯಾನು
೩. ಹಾಡನು ೪. ಹಾಡುವನು
೧೧. ’ಈ ದಿನ ಮಳೆ ಬಾರದು’
ಈ ವಾಕ್ಯದಲ್ಲಿರುವ ಕ್ರಿಯಾರೂಪ:
೧. ನಿಷೇಧಾರ್ಥಕ ೨. ಸಂಭವನಾರ್ಥಕ
೩. ವಿದ್ಯರ್ಥಕ ೪. ಕ್ರಿಯಾರ್ಥಕ
೧೨. ’ಹಾಡು’ ಪದದ ವಿದ್ಯರ್ಥಕ ರೂಪ:
೧. ಹಾಡಲಿ ೨.
ಹಾಡಿಯಾನು
೩. ಹಾಡನು ೪. ಹಾಡಿದನು
೧೩. ’ನೋಡನು’ ಈ ಕ್ರಿಯಾಪದ ಈ ರೂಪದಲ್ಲಿದೆ.
೧. ನಿಷೇಧಾರ್ಥಕ ೨. ಸಂಭವನಾರ್ಥಕ
೩. ವಿದ್ಯರ್ಥಕ ೪. ಕ್ರಿಯಾರ್ಥಕ
೧೪. ಸಂಭವನಾರ್ಥಕ ರೂಪಕ್ಕೆ ಉದಾಹರಣೆ:
೧. ಮಾಡಲಿ ೨. ಮಾಡನು
೩. ಮಾಡಿಯಾನು ೪. ಮಾಡಿದನು
ಕಾಲಗಳು
೧. ’ರಾಹಿಲನು ಮನೆಯ ಒಳಗೆ
ಬರುತ್ತಾನೆ.’ ಈ ವಾಕ್ಯವು ಯಾವ
ಕಾಲ ಸೂಚಕದಲ್ಲಿದೆ.
೧. ಭೂತಕಾಲ ೨. ವರ್ತಮಾನಕಾಲ
೩. ಭವಿಷ್ಯತ್ ಕಾಲ ೪. ಕ್ರಿಯಾರ್ಥಕಾಲ
೨. ’ಅವನು ಊಟ ಮಾಡುವನು’
ಭೂತಕಾಲಕ್ಕೆ ಪರಿವರ್ತಿಸಿದಾಗ
೧. ಅವನು ಊಟ ಮಾಡಿದನು ೨. ಅವನು ಊಟ ಮಾಡುತ್ತಿದ್ದಾನೆ
೩. ಅವನು ಊಟ ಮಾಡನು ೪. ಅವನು
ಊಟ ಮಾಡುತ್ತಾನೆ.
೩. ಭೂತಕಾಲದ ಕಾಲಸೂಚಕ
ಪ್ರತ್ಯಯ:
೧. ಉತ್ತ ೨. ದ
೩. ದ ೪. ಉವ
೪. ’ವರ್ತಮಾನಕಾಲದ’ ಕಾಲ
ಸೂಚಕ ಪ್ರತ್ಯಯ:
೧. ದ ೨. ಉತ್ತ
೩. ಉ ೪. ವ
ಸಮಾಸಗಳು
೧. ’ಮೂಗಾವುದ’ ಎಂಬುದು ಈ ಸಮಾಸಕ್ಕೆ ಸೇರಿದೆ.
೧. ಕ್ರಿಯಾಸಮಾಸ ೨. ಗಮಕ ಸಮಾಸ
೩. ದ್ವಂದ್ವ ಸಮಾಸ ೪. ದ್ವಿಗು ಸಮಾಸ
೨. ಇದು ತತ್ಪುರುಷ ಸಮಾಸಕ್ಕೆ ಉದಾಹರಣೆಯಾಗಿದೆ.
೧. ಇಮ್ಮಾವು ೨.
ಮುಕ್ಕಣ್ಣ
೩. ಬೆಟ್ಟದಾವರೆ ೪. ಸಪ್ತಸ್ವರ
೩. ಕ್ರಿಯಾಸಮಾಸಕ್ಕೆ ಉದಾಹರಣೆಯಾದ
ಪದವಿದು:
೧. ಕಡೆಗಣ್ಣು ೨.
ಸಾಕ್ಷಿಮಾಡಿ
೩. ಮೆಲ್ವಾತು ೪. ತಲೆನೋವು
೪. ’ಫಲಪುಷ್ಪಗಳು’
ಇದು ಈ ಸಮಾಸವಾಗಿದೆ.
೧. ಕ್ರಿಯಾಸಮಾಸ ೨. ಗಮಕ ಸಮಾಸ
೩. ದ್ವಂದ್ವ ಸಮಾಸ ೪. ದ್ವಿಗು ಸಮಾಸ
೫. ’ಮೂಲೋಕ’
ಇದು ಈ ಸಮಾಸಕ್ಕೆ ಉದಾಹರಣೆ:
೧. ಕ್ರಿಯಾಸಮಾಸ ೨.
ಗಮಕ ಸಮಾಸ
೩. ದ್ವಂದ್ವ ಸಮಾಸ ೪. ದ್ವಿಗು ಸಮಾಸ
೬. ’ಹೊಸಗನ್ನಡ’ ಇದರಲ್ಲಿರುವ ಸಮಾಸ:
೧. ತತ್ಪುರುಷ ೨.
ಕರ್ಮಧಾರೆಯ
೩. ದ್ವಿಗು ೪. ಅಂಶಿ ಸಮಾಸ
೭. ’ ಇಮ್ಮಾವು’ ಇದು ಈ
ಸಮಾಸಕ್ಕೆ ಉದಾಹರಣೆ:
೧. ತತ್ಪುರುಷ ೨.
ಕರ್ಮಧಾರೆಯ
೩. ದ್ವಿಗು ೪. ಅಂಶಿ ಸಮಾಸ
೮. ’ಸೂರ್ಯಚಂದ್ರರು’ - ಈ ಪದದಲ್ಲಿರುವ ಸಮಾಸ
೧. ದ್ವಂದ್ವಸಮಾಸ ೨. ಬಹುವ್ರೀಹಿ
ಸಮಾಸ
೩. ಗಮಕ ಸಮಾಸ ೪. ಅಂಶಿ ಸಮಾಸ
೯. ’ ಆ ಕಲ್ಲು’ - ಈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ.
೧. ಗಮಕ ೨. ತತ್ಪುರುಷ
೩. ಕ್ರಿಯಾ ೪. ದ್ವಂದ್ವ
೧೦. ’ನಡುರಾತ್ರಿ’ ಪದವು ಈ
ಸಮಾಸಕ್ಕೆ ಸೇರಿದೆ.
೧. ಕರ್ಮಧಾರಯ ೨.
ಅಂಶಿ
೩. ದ್ವಂದ್ವ ೪. ಕ್ರಿಯಾ
೧೧. ’ತಲೆನೋವು’ ಪದವು ಈ ಸಮಾಸಕ್ಕೆ ಉದಾಹರಣೆ:
೧. ತತ್ಪುರುಷ ೨. ಕರ್ಮಧಾರಯ
೩. ಕ್ರಿಯಾ ೪. ದ್ವಂದ್ವ
೧೨. ’ಕಣ್ದೆರೆ’ ಈ ಪದದಲ್ಲಿರುವ
ಸಮಾಸ:
೧. ಅಂಶಿ ೨. ದ್ವಂದ್ವ
೩. ಕ್ರಿಯಾ ೪. ಗಮಕ
೧೩. ’ಮಹೀಪತಿ’ ಪದವು ಈ
ಸಮಾಸಕ್ಕೆ ಉದಾಹರಣೆ:
೧. ಕರ್ಮಧಾರಯ ೨. ದ್ವಂದ್ವ
೩. ಬಹುವ್ರೀಹಿ ೪. ದ್ವಿಗು
೧೪. ಇವುಗಳಲ್ಲಿ ಬಹುವ್ರೀಹಿ
ಸಮಾಸಕ್ಕೆ ಉದಾಹರಣೆ:
೧. ಹೊಸಗನ್ನಡ ೨.
ದೀನಾನಾಥರು
೩. ಪೆರ್ಬಯಕೆ ೪. ಚಕ್ರಪಾಣಿ
೧೫. ’ಕಡೆಗಣ್ಣು’ ಪದವು ಈ ಸಮಾಸಕ್ಕೆ ಉದಾಹರಣೆ:
೧. ದ್ವಂದ್ವ ೨. ತತ್ಪುರುಷ
೩. ಬಹುವ್ರೀಹಿ ೪. ಅಂಶಿ
೧೬. ’ಪೆರ್ಮರ’ ಈ ಪದ ಯಾವ ಸಮಾಸಕ್ಕೆ ಉದಾಹರಣೆ:
೧. ತತ್ಪುರುಷ ೨. ದ್ವಂದ್ವ
೩. ಕರ್ಮಧಾರಯ ೪. ದ್ವಿಗು
೧೭. ’ರಾಮಲಕ್ಷ್ಮಣರು’ ಇದು ಈ ಸಮಾಸಕ್ಕೆ ಉದಾಹರಣೆ:
೧. ಕರ್ಮಧಾರಯ ೨. ದ್ವಂದ್ವ
೩. ದ್ವಿಗು ೪. ತತ್ಪುರುಷ
ಅವ್ಯಯಗಳು
೧. ಸಂಬಂಧಾರ್ಥಕಾವ್ಯಯಕ್ಕೆ
ಉದಾಹರಣೆಯಾಗಿರುವ ಪದ.
೧. ನೀನೇ ೨. ಆದ್ದರಿಂದ
೨. ಚೆನ್ನಾಗಿ ೪. ಸಾಕು
೨. ಕ್ರಿಯಾಪದದ ಸ್ಥಾನದಲ್ಲಿದ್ದು
ವಾಕ್ಯದ ಅರ್ಥವನ್ನು
ಪೂರ್ಣಗೊಳಿಸುವ ಅವ್ಯಯ:
೧. ಸಾಮಾನ್ಯ ಅವ್ಯಯ ೨. ಅನುಕರಣ ಅವ್ಯಯ
೩. ಕ್ರಿಯಾರ್ಥಕ ಅವ್ಯಯ ೪. ಸಂಬಂಧಾರ್ಥಕ
ಅವ್ಯಯ
೩. ’ಆದ್ದರಿಂದ’ ಪದವು ಈ ಅವ್ಯಯಕ್ಕೆ ಉದಾಹರಣೆ:
೧. ಸಾಮಾನ್ಯ ಅವ್ಯಯ ೨. ಅನುಕರಣ ಅವ್ಯಯ
೩. ಕ್ರಿಯಾರ್ಥಕ ಅವ್ಯಯ ೪. ಸಂಬಂಧಾರ್ಥಕ
ಅವ್ಯಯ
೪. ’ಅದುವೇ’ ಎಂಬುದು ಈ
ಅವ್ಯಯಕ್ಕೆ ಪದವಾಗಿದೆ.
೧. ಸಂಬಂಧಾರ್ಥಕಾವ್ಯಯ ೨. ಕ್ರಿಯಾರ್ಥಕಾವ್ಯಯ
೩. ಅವಧಾರಣಾರ್ಥಕಾವ್ಯಯ ೪.
ಸಾಮಾನ್ಯಾವ್ಯಯ
೫. ಅದೇ ನನ್ನ ಪುಸ್ತಕ - ಇ ವಾಕ್ಯದಲ್ಲಿರುವ ಅವ್ಯಯದ ವಿಧ:
೧. ಸಂಬಂಧಾರ್ಥಕಾವ್ಯಯ ೨. ಕ್ರಿಯಾರ್ಥಕಾವ್ಯಯ
೩. ಅವಧಾರಣಾರ್ಥಕಾವ್ಯಯ
೪.
ಸಾಮಾನ್ಯಾವ್ಯಯ
೬. ಈ ಕೆಳಗಿನ ಪದಗಳಲ್ಲಿ
ಭಾವಸೂಚಕಾವ್ಯಯ ಪದ:
೧. ನೆಟ್ಟಗೆ ೨. ಅವನಂತೆ
೩. ಅಯ್ಯೋ ೪.
ಚುರುಚುರು
೭. ಈ ಕೆಳಗಿನವುಗಳಲ್ಲಿ
ಸಾಮಾನ್ಯಾವ್ಯಯಕ್ಕೆ ಉದಾಹರಣೆ
೧. ಸುಮ್ಮನೆ ೨. ಅವನಂತೆ
೩. ಬೇಡ ೪. ಅವನೇ
೮. ’ತರುವಾಯ’ ಪದವು ಈ
ಅವ್ಯಯಕ್ಕೆ ಉದಾಹರಣೆಯಾಗಿದೆ.
೧. ಸಮಾನ್ಯ ಅವ್ಯಯ ೨. ಸಂಬಂಧಾರ್ಥಕ ಅವ್ಯಯ
೩. ಭಾವಸೂಚಕ ಅವ್ಯಯ ೪. ಕ್ರಿಯಾರ್ಥಕ
ಅವ್ಯಯ
೯. ’ಹಾವು ಸರಸರನೆ ಹರಿದು ಹೋಯಿತು’ ಈ ವಾಕ್ಯದಲ್ಲಿರುವ
ಅನುಕರಣಾವ್ಯಯ
೧. ಸರಸರ ೨.
ಹರಿದು
೩. ಹಾವು ೪. ಹೋಯಿತು
೧೦. ’ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ
ಸಂದರ್ಭದಲ್ಲಿ ಬಳಸುವ
ಅವ್ಯಯ ಇದಾಗಿದೆ:
೧. ಕ್ರಿಯಾರ್ಥಕಾವ್ಯಯ ೨. ಸಾಮಾನ್ಯಾವ್ಯಯ
೩. ಅವಧಾರಣಾರ್ಥಕಾವ್ಯಯ ೪. ಅನುಕರಣಾವ್ಯಯ
೧೧. ’ಅವರೇ’ ಪದವು ಈ ಅವ್ಯಯಕ್ಕೆ ಉದಾಹರಣೆ:
೧. ಸಾಮಾನ್ಯಾವ್ಯಯ ೨. ಭಾವಸೂಚಕಾವ್ಯಯ
೩. ಸಂಬಂಧಾರ್ಥಕಾವ್ಯಯ ೪. ಅವಧಾರಣಾರ್ಥಕಾವ್ಯಯ
೧೨. ಅಥವಾ ಎಂಬುದು
೧. ಅನುಕರಣಾವ್ಯಯ ೨. ಸಂಬಂಧಾರ್ಥಕಾವ್ಯಯ
೩. ಸಾಮಾನ್ಯಾವ್ಯಯ ೪. ಭಾವಸೂಚಕಾವ್ಯಯ
ಸರ್ವನಾಮ
೧. ತಾನು ಎಂಬುದು ಈ ಸರ್ವನಾಮಕ್ಕೆ
ಉದಾಹರಣೆ
೧. ಪ್ರಶ್ನಾರ್ಥಕ ೨. ಪುರುಷವಾಚಕ
೩. ಆತ್ಮಾರ್ಥಕ ೪. ಸಂಖ್ಯಾವಾಚಕ
೨. ಸರ್ವನಾಮ ಪದಕ್ಕೆ ಉದಾಹರಣೆಯಿದು.
೧. ವ್ಯಾಪಾರಿ ೨. ನದಿ
೩. ಯಾರು ೪. ರಮೇಶ
೩. ಆತ್ಮಾರ್ಥಕ ಸರ್ವನಾಮ
ಪದ ಇದಾಗಿದೆ.
೧. ತಾವು ೨.
ಅವನು
೩. ಅದು ೪. ನೀನು
೪. ಇವುಗಳಲ್ಲಿ ಅನ್ಯಪುರುಷ
ಸರ್ವನಾಮ:
೧. ನಾನು ೨. ನೀನು
೩. ಯಾರು ೪. ಅವನು
೫. ಪ್ರಥಮ ಪುರುಷ ಸರ್ವನಾಮಕ್ಕೆ
ಉದಾಹರಣೆ:
೧. ನಾನು ೨. ನೀನು
೩. ಅದು ೪. ನಾವು
ಕೃದಂತಗಳು
೧. ನಿಷೇಧ ಕೃದಂತಕ್ಕೆ
ಉದಾಹರಣೆಯಾಗಿರುವ ಪದ.
೧. ಮಾಡಿದ ೨. ಮಾಟ
೩. ಮಾಡಲು ೪. ಓಡದ
೨. ವರ್ತಮಾನ ಕೃದಂತನಾಮಕ್ಕೆ
ಈ ಪದವು ಉದಾಹರಣೆಯಾಗಿದೆ.
೧. ಬರೆಯಲಿ ೨. ಬರೆದ
೨. ನಿಷೇಧಾರ್ಥಕ ೪. ಬರೆಯುವ
೩. ’ನಗು’ ಧಾತುವಿನ ಕೃದಂತ ಭಾವನಾಮ.
೧. ನಗುತ್ತಾನೆ ೨. ನಗುತ್ತಾರೆ
೩. ನಗುವರು ೪. ನಗುವುದು
೪. ’ಅಂಜು’ ಧಾತುವಿನ ಕೃದಂತ ಭಾವನಾಮ
೧. ಅಂಜದಿರು ೨. ಅಂಜಿಕೆ
೩. ಅಂಜದೆ ೪. ಅಂಜಲು
೫. ’ಬರೆಯುವಿಕೆ’ ಪದವು
ಈ ವ್ಯಾಕರಣಾಂಶಕ್ಕೆ ಉದಾಹರಣೆ:
೧. ಕೃದಂತಗಳು ೨. ಕೃದಂತ ಭಾವನಾಮ
೩. ಕೃದಂತಾವ್ಯಯ ೪. ತದ್ಧಿಂತಾತಗಳು
೬. ’ತೊಡುಗೆ’ ಪದವು ಈ
ವ್ಯಾಕರಣಾಂಶಕ್ಕೆ ಉದಾಹರಣೆ:
೧. ಕೃದಂತಗಳು ೨. ಕೃದಂತ ಭಾವನಾಮ
೩. ಕೃದಂತಾವ್ಯಯ ೪. ತದ್ಧಿಂತಾತಗಳು
೭. ಕೃದಂತಭಾವನಾಮಕ್ಕೆ ಉದಾಹರಣೆಯಾದ ಪದ:
೧. ತಿನ್ನುವ ೨. ಓಡಿ
೩. ಬಾಳಿದ ೪. ನೆನಪು
೮. ’ಕೃದಂತಭಾವನಾಮ’ ಕ್ಕೆ
ಉದಾಹರಣೆ:
೧. ಮಾಡಲಿಕ್ಕೆ ೨. ಮಾಟ
೩. ಮಾಡಲು ೪. ಮಾಡಿದ
೯. ’ಆಟ’ ಇದು ಯಾವ ವ್ಯಾಕರಣಾಂಶಕ್ಕೆ ಸೇರಿದೆ.
೧. ಕೃದಂತಗಳು ೨. ಕೃದಂತ ಭಾವನಾಮ
೩. ಕೃದಂತಾವ್ಯಯ ೪. ತದ್ಧಿಂತಾಂತಗಳು
ಅಲಂಕಾರಗಳು
೧. ನಿರೋಷ್ಠ್ಯ, ತಾಲವ್ಯ,
ಏಕಾಕ್ಷರ, ಮುರಜಬಂಧ ಇತ್ಯಾದಿ
ಪ್ರಕಾರಗಳನ್ನೊಳಗೊಂಡ
ಶಬ್ದಾಲಂಕಾರವಿದು.
೧. ವೃತ್ಯನುಪ್ರಾಸ ೨. ಛೇಕಾನುಪ್ರಾಸ
೩. ಯಮಕ ೪. ಚಿತ್ರಕವಿತ್ವ
೨. ’ಮಾತುಬಲ್ಲವನಿಗೆ ಜಗಳವಿಲ್ಲ:
ಊಟ ಬಲ್ಲವನಿಗೆ ರೋಗವಿಲ್ಲ’
ಈ ವಾಕ್ಯದಲ್ಲಿರುವ
ಅಲಂಕಾರ:
೧. ಉತ್ಪ್ರೇಕ್ಷಾಲಂಕಾರ ೨. ರೂಪಕಾಲಂಕಾರ
೩. ದೃಷ್ಟಾಂತಾಲಂಕಾರ ೪. ಉಪಮಾಲಂಕಾರ
೩. ಎರಡು ಬೇರೆ ಬೇರೆ ವಾಕ್ಯಗಳಲ್ಲಿ
ಅರ್ಥಸಾದೃಶ್ಯದಿಂದ ಬಿಂಬ
ಪ್ರತಿಬಿಂಬ ಭಾವ ತೋರಿದರೆ
ಅದು ಯಾವ ಅಲಂಕಾರ?
೧. ಉಪಮಾಲಂಕಾರ ೨. ಶ್ಲೇಷಾಲಂಕಾರ
೩. ದೃಷ್ಟಾಂತಾಲಂಕಾರ ೪. ರೂಪಕಾಲಂಕಾರ
ದ್ವಿರುಕ್ತಿ, ಅನುಕರಣಾವ್ಯಯ, ಜೋಡುನುಡಿ
೧. ’ಥಳಥಳ’ ಎಂಬುದು ಈ
ವ್ಯಾಕರಣಾಂಶಕ್ಕೆ ಸೇರುತ್ತದೆ.
೧. ಜೋಡಿಪದ
೨. ದ್ವಿರುಕ್ತಿ
೩. ಅನುಕರಣಾವ್ಯಯ ೪.
ಪಡೆನುಡಿ
೨. ದ್ವಿರುಕ್ತಿ ಪದಕ್ಕೆ
ಇದು ಉದಾಹರಣೆ:
೧. ಸೊಪ್ಪು ಸದೆ ೨. ಬೆಟ್ಟ ಗುಡ್ಡ
೩. ಹುಳ ಹುಪ್ಪಡಿ ೪. ತಿರು ತಿರುಗಿ
೩. ’ಕೊನೆಕೊನೆಗೆ’ ಇದನ್ನು
ಹೀಗೆನ್ನುವರು.
೧. ಜೋಡಿಪದ
೨. ದ್ವಿರುಕ್ತಿ
೩. ಅನುಕರಣಾವ್ಯಯ ೪.
ಪಡೆನುಡಿ
೪. ಇವುಗಳಲ್ಲಿ ದ್ವಿರುಕ್ತಿಗೆ
ಉದಾಹರಣೆ:
೧. ಇಲ್ಲಿಲ್ಲ ೨.
ಅಬ್ಬಬ್ಬಾ
೩. ಅಲ್ಲಲ್ಲಿ ೪. ಮನೆಮಾರು
೫. ಇವುಗಳಲ್ಲಿ ಜೋಡುನುಡಿಗೆ ಉದಾಹರಣೆಯಾಗಿದೆ.
೧. ಮನೆಮಠ ೨. ಬಟ್ಟಬಯಲು
೩. ಕಟ್ಟಕಡೆಗೆ ೪. ಧಗಧಗ
೬. ಇವುಗಳಲ್ಲಿ ಜೋಡುನುಡಿಗೆ
ಉದಾಹರಣೆಯಾದ ಪದವಿದು:
೧. ಮೊಟ್ಟಮೊದಲು ೨. ಧಗಧಗ
೩. ಮೊದಲ ಮಾತು ೪. ಹಾಲುಗೀಲು
ಛಂದಸ್ಸು
೧. ’ಮರಭನಯಯಯ’ ಗಣವಿನ್ಯಾಸ ಬರುವ ಖ್ಯಾತಕರ್ಣಾಟಕ ವೃತ್ತ
೧. ಚಂಪಕಮಾಲಾ ವೃತ್ತ ೨. ಶಾರ್ದೂಲ ವಿಕ್ರೀಡಿತ
೩. ಮಹಾಸ್ರಗ್ದರಾ ೪. ಸ್ರಗ್ದರಾವೃತ್ತ
೨. ಸ, ಭ, ರ, ನ, ಮ, ಯ,
ಲ, ಗು ಈ ಗಣ ವಿನ್ಯಾಸ ಬರುವ ವೃತ್ತ್ಸ್
೧. ಮತ್ತೇಭವಿಕ್ರೀಡಿತ ವೃತ್ತ ೨. ಚಂಪಕಮಾಲಾವೃತ್ತ
೩. ಸ್ರಗ್ದರಾವೃತ್ತ ೪. ಉತ್ಪಲಮಾಲಾವೃತ್ತ
೩. ಗುರು-ಲಘು ನಡುವಿರೆ
ಅದು:
೧. ಮ-ನ ಗಣ ೨. ಭ-ಯ ಗಣ
೩. ಜ-ರ ಗಣ ೪. ಸ-ತ ಗಣ
೪. ಇವುಗಳಲ್ಲಿ ಯಾವುದು
ರಗಳೆಯ ವಿಧವಲ್ಲ?
೧. ಭೋಗ ೨.
ಉತ್ಸಾಹ
೩. ಮಂದಾನಿಲ ೪. ಲಲಿತ
ಜಗದೀಶ ಯಾವ ಸಂದಿ ಬರುತ್ತೆ ಸರ್
ReplyDeleteಜಗತ್+ಈಶ=ಜಗದೀಶ
Deleteಜಶ್ತ್ವ ಸಂಧಿ
ಯಥೇಚ್ಛ ಯಾವ ಸಂಧಿ
ReplyDeleteಯಥೇಚ್ಛ ಯಾವ ಸಂಧಿ
ReplyDeleteಗುಣ ಸಂಧಿ
DeleteFor reading it is very important
ReplyDeleteಕಂಡಿತು ಎನ್ನುವ ಪದದ ಧಾತು ಏನು ಸಾರ್
ReplyDeleteಕಷ್ಟಕಾರ್ಪಣ್ಯ ಪದದ ಯಾವ ವ್ಯಾಕಾರಾಂಶಕ್ಕೆ ಸೇರಿದೆ
ReplyDelete1. ದ್ವಿರುಕ್ತಿ
2. ಜೋಡುನುಡಿ
3. ಅಣುಕಾರುಣ್ಯ
ಪ್ರಾಣಾಹುತಿ ಇದು ಯಾವ ಸಂಧಿ
ReplyDeleteThanks sir
ReplyDelete