ಪರೀಕ್ಷಾ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಹಿತನುಡಿ
ವಿದ್ಯಾರ್ಥಿ
ಜೀವನ ಬದುಕಿನ ಅತ್ಯಂತ ಮಹತ್ವದ ಘಟ್ಟ: ಈ ಸಮಯದಲ್ಲಿ ನಾವೆಷ್ಟು
ಶ್ರಮವಹಿಸಿ
ವಿದ್ಯಾರ್ಜನೆ ಮಾಡುತ್ತೇವೆ ಎನ್ನುವ ಆಧಾರದಿಂದ ನಮ್ಮ ಉಳಿದ ಜೀವನ
ಅವಲಂಬಿತವಾಗಿರುತ್ತದೆ.ವಿದ್ಯಾರ್ಥಿ ಜೀವನದಲ್ಲಿ ನಮ್ಮ ಸಮಯವನ್ನು
ವ್ಯರ್ಥಮಾಡಬಾರದು.
"ಮುತ್ತಿಗಿಂತ
ಹೊತ್ತು ಉತ್ತಮ" ಎನ್ನುವಂತೆ
ಹೊತ್ತಿನ ಸದುಪಯೋಗ ಮಾಡಿಕೊಳ್ಳಬೇಕು.
ಓದುವಾಗ ಕಷ್ಟ
ಅನಿಸಿದರೆ ಮುಂದೆ ಸುಖವಿದೆ ಎಂದು ನಿಮಗೆ ನೀವೆ ಸಮಾಧಾನ
ಮಾಡಿಕೊಳ್ಳಲು
ಪ್ರಯತ್ನಿಸಿ . ಭೂಮಿಯ ಮೇಲಿರುವ
ಪ್ರತಿಯೊಂದು ಜೀವಿಯು ಒಂದಲ್ಲ
ಒಂದುರೀತಿಯ ಶ್ರಮಪಡಬೇಕಾಗುತ್ತದೆ.
ತಂದೆ-ತಾಯಿ ಬಂಧುಗಳು ನಿಮ್ಮ ಯಶಸ್ಸನ್ನು ನಿರ್ಧರಿಸಲಾರರು. ಅವರು
ನಿಮಗೆ ಪೂರಕ ನೇರವಾಗಬಹುದು. ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ.
ನಿಮ್ಮ
ಬದುಕನ್ನು
ಸುಂದರ ಶಿಲ್ಪವನ್ನಾಗಿ ಕೆತ್ತುವ ಸಾಮರ್ಥ್ಯ ವಿದ್ಯೆಗಿದೆ ಎನ್ನುವುದನ್ನು
ನೆನಪಿಟ್ಟುಕೊಂಡು ಕಠಿಣ ಪರಿಶ್ರಮದ ಸಂಕಲ್ಪ
ಕೈಗೊಳ್ಳಬೇಕು.
ಸಮಯದ
ಮಹತ್ವ: ಸಮಯಕ್ಕೆ ಬೆಲೆ ನೀಡುವ ವ್ಯಕ್ತಿ ಉನ್ನತ ಸಾಧನೆ ಮಾಡಬಲ್ಲ.
ಪರೀಕ್ಷೆಗೆ
ಕೆಲವೇ ದಿನ ಬಾಕಿ ಇರುವುದರಿಂದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಪ್ರತಿ
ನಿಮಿಷಕ್ಕೂ ಮಹತ್ವವನ್ನು ನೀಡಬೇಕು.
ವಿದ್ಯಾರ್ಥಿಗಳಲ್ಲಿ ಸಿದ್ಧತೆಯ ಕೊರತೆ: "ಯುದ್ಧ ಕಾಲೆ ಶಸ್ತ್ರಾಭ್ಯಾಸ" ಎನ್ನುವಂತೆ ಕೆಲವು ವಿದ್ಯಾರ್ಥಿಗಳು
ಪರೀಕ್ಷೆಯ ಕೊನೆಯ ಹಂತದ ತನಕ ಯಾವುದೇ ಸಿದ್ಧತೆ
ನಡೆಸುವುದಿಲ್ಲ. ಕೊನೆಯ
ಹಂತದಲ್ಲಿ
ಸಿದ್ಧತೆಗೆ ಮುಂದಾಗುವ ವಿದ್ಯಾರ್ಥಿಗಳು ಉದ್ವೇಗ, ಒತ್ತಡಕ್ಕೆ ಒಳಗಾಗುತ್ತಾರೆ.
ಪರೀಕ್ಷೆಯಲ್ಲಿ
ಕೆಲವು ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರು ಉತ್ತರಿಸಲು ಆಗುವುದಿಲ್ಲ.
ಆದ್ದರಿಂದ
ಸಮಯಕ್ಕೆ ಮಹತ್ವ ನೀಡಬೇಕು.
ಅನುಮಾನ ಬಿಟ್ಟು ಪರೀಕ್ಷೆ ಎದುರಿಸಬೇಕು: "ಅನುಮಾನಂ ಪೆದ್ದರೋಗಂ" ಅನ್ನುವಂತೆ
ಅನುಮಾನವುನಮಗೆ
ಹೆದರಿಕೆಯಾಗಿ ಪರಿಣಮಿಸುತ್ತದೆ. ಯಾವುದೆ ಅನುಮಾನವಿಲ್ಲದೆ
’ತರ್ಕ ಮತ್ತು ಧೈರ್ಯ’ ಎಂಬ ಎರಡು ಆಯುಧಗಳಿಂದ ಅನುಮಾನ ಬಿಟ್ಟು
ಪರೀಕ್ಷೆ
ಎದುರಿಸಬೇಕು.
ಹಳೆಯ ಪ್ರಶ್ನೆಪತ್ರಿಕೆಯಿಂದ ವಿದ್ಯಾರ್ಥಿಗಳಿಗೆ ಲಾಭ: ಪ್ರಶ್ನೆಪತ್ರಿಕೆಗಳನ್ನು ಹೆಚ್ಚುಹೆಚ್ಚು
ಬಿಡಿಸುವುದರಿಂದ ದೀರ್ಘಕಾಲ ನೆನಪಿನಲ್ಲಿ ಇರುತ್ತದೆ. ನಿಗದಿತ ಸಮಯದ ಮಿತಿಯಲ್ಲಿ
ಎಲ್ಲ
ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.
ಕಾಗುಣಿತ ದೋಷವಿಲ್ಲದ ಬರವಣಿಗೆಯನ್ನು
ರೂಢಿಸಿಕೊಳ್ಳಬೇಕು.
ಪೂರ್ವ ಸಿದ್ಧತಾ ಪರೀಕ್ಷೆಯನ್ನು ಗಂಭಿರವಾಗಿ ಪರಿಗಣಿಸಬೇಕು: ಶಾಲೆಗಳಲ್ಲಿ ನಡೆಸುವ
ಪೂರ್ವ
ಸಿದ್ಧತಾ ಪರೀಕ್ಷೆಯನ್ನು ಕೆಲವು ವಿದ್ಯಾರ್ಥಿಗಳು ನಿರ್ಲಕ್ಷಿಸುತ್ತಿದ್ದಾರೆ. ಯಶಸ್ಸು
ಎನ್ನುವುದು
ಒಂದು ದಿನದಿಂದ ಬರುವುದಿಲ್ಲ. ಯಶಸ್ಸಿನ ಹಾದಿಯಲ್ಲಿ ಸಾಗಲು ಇಂತಹ
ಪೂರಕ ಪರೀಕ್ಷೆಯನ್ನು ಬರೆಯಬೇಕು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ
ತಪ್ಪುಗಳನ್ನು
ಮಾಡಿದರೆ
ಅದನ್ನು ಇನ್ನೊಮ್ಮೆ ಚೆನ್ನಾಗಿ ಓದುವ ಮೂಲಕ ಅಂತಿಮ ಪರೀಕ್ಷೆಯಲ್ಲಿ
ಸಮರ್ಪಕವಾಗಿ
ಉತ್ತರಿಸಲು ಸಾಧ್ಯವಾಗುತ್ತದೆ. ನಿಮ್ಮ ಸಿದ್ಧತೆ ಎಷ್ಟು ಸಮರ್ಪಕವಾಗಿದೆ
ಎಂದು
ಸ್ವ-ವಿಮರ್ಶೆಗೊಳಪಡಿಸಲು ಪೂರಕ ಪರೀಕ್ಷೆ
ಉತ್ತಮ. ಪೂರ್ವ ಸಿದ್ಧತಾ ಪರೀಕ್ಷೆಯಿಂದ
ನೀವು
ಮಾಡಿದ ತಪ್ಪುಗಳಿಂದ ಪಾಠ ಕಲಿತು ಅಂತಿಮ ಪರೀಕ್ಷೆಯಲ್ಲಿ ಅವು ಮರುಕಳಿಸದಂತೆ ಎಚ್ಚರವಹಿಸಬಹುದು.ಪೂರ್ವ ಸಿದ್ಧತಾ ಪರೀಕ್ಷೆಯನ್ನು
ಅಂತಿಮ ಪರೀಕ್ಷೆಯಂತೆ ಪರಿಗಣಿಸಬೇಕು.
ಈ ಇಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು
ಪ್ರಯತ್ನಿಸಿದಾಗ ಪ್ರಯತ್ನಕ್ಕೆ ಫಲ
ಎನ್ನುವ
ಮಾತು ಸತ್ಯವಾಗುತ್ತದೆ.
No comments:
Post a Comment