ಅಲಂಕಾರ
ಹತ್ತನೆಯ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡದ ವ್ಯಾಕರಣ ವಿಭಾಗದ ಅಲಂಕಾರದಲ್ಲಿ ೩ ಅಂಕವನ್ನು
ಪಡೆಯಲು ಕೆಲವು ಪ್ರಶ್ನೆಗಳು ಉತ್ತರಸಹಿತ ಮತ್ತು ಕೆಲವು
ಉತ್ತರರಹಿತ.
೧. ಉಪಮಾಲಂಕಾರ
೧. ರಾಹೀಲನು
ಪರೀಕ್ಷಿಸುತ್ತಿದ್ದಂತೆ ನೋವೊಂದು ಅಲೆಯಂತೆ ಬಂದು ಆಕೆ ಕೂಗಿಕೊಳ್ಳುವಂತೆ ಮಾಡಿತು.
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ
: ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ.
ಉಪಮೇಯ ( ವರ್ಣ್ಯ
) : ನೋವು
ಉಪಮಾನ ( ಅವರ್ಣ್ಯ) : ಅಲೆ
ಉಪಮಾವಾಚಕ ಪದ : ಅಂತೆ
ಸಮಾನಧರ್ಮ : ಬರುವಿಕೆ
ಸಮನ್ವಯ : ಇಲ್ಲಿ ಉಪಮೇಯವಾದ ನೋವನ್ನು
ಉಪಮಾನವಾದ ಅಲೆಗೆ ಪರಸ್ಪರ ಹೋಲಿಸಿ
ಹೇಳಿರುವುದರಿಂದ
ಇದು (ಪೂರ್ಣೋಪಮಾಲಂಕಾರ) ಉಪಮಾಲಂಕಾರವಾಗಿದೆ.
೨. ಹಸುಳೆಯಂತೆ
ಕಾಂಬನಂತೆ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ
ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ
ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ಲುಪ್ತ ( ಶ್ರೀರಾಮ)
ಉಪಮಾನ ( ಅವರ್ಣ್ಯ) : ಹಸುಳೆ
ಉಪಮಾವಾಚಕ ಪದ : ಅಂತೆ
ಸಮಾನಧರ್ಮ :ಕಾಣುವುದು
ಸಮನ್ವಯ :ಇಲ್ಲಿ ಉಪಮೇಯವಾದ ಶ್ರೀರಾಮನನ್ನು ಉಪಮಾನವಾದ
ಹಸುಳೆಗೆ ಪರಸ್ಪರ
ಹೋಲಿಸಿ ಹೇಳಿರುವುದರಿಂದ ಇದು
ಉಪಮಾಲಂಕಾರವಾಗಿದೆ.
೩. ಹೊಳೆ ಕಡಲಿಗೆ ಸೇರುವ ತೆರದಿ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
) : ಮನಸ್ಸು
ಉಪಮಾನ ( ಅವರ್ಣ್ಯ) : ಹೊಳೆ ಕಡಲಿಗೆ ಸೇರುವ
ಉಪಮಾವಾಚಕ ಪದ : ತೆರದಿ
ಸಮಾನಧರ್ಮ : ಸೇರುವುದು
ಸಮನ್ವಯ : ಇಲ್ಲಿ ಉಪಮೇಯವಾದ ಮನಸ್ಸನ್ನು ಉಪಮಾನವಾದ
ಹೊಳೆ ಕಡಲಿಗೆ
ಸೇರುವುದನ್ನು ಪರಸ್ಪರ ಹೋಲಿಸಿ ಹೇಳಿರುವುದರಿಂದ ಇದು ಉಪಮಾಲಂಕಾರವಾಗಿದೆ
೪. ಹಾರಬಯಸೆನೀ ಹಕ್ಕಿಯಂತೆ
ಅಲಂಕಾರದ
ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
) : ಶಬರಿ
ಉಪಮಾನ ( ಅವರ್ಣ್ಯ) : ಹಕ್ಕಿ
ಉಪಮಾವಾಚಕ ಪದ : ಅಂತೆ
ಸಮಾನಧರ್ಮ : ಹಾರುವುದು
ಸಮನ್ವಯ : ಇಲ್ಲಿ ಉಪಮೇಯವಾದ ಶಬರಿಯನ್ನು ಉಪಮಾನವಾದ ಹಕ್ಕಿಗೆ
ಪರಸ್ಪರ ಹೋಲಿಸಿ ಹೇಳಿರುವುದರಿಂದ ಇದು
ಉಪಮಾಲಂಕಾರವಾಗಿದೆ.
೫. ತೇಲಬಯಸೆನೀ ಬಿಳಿಮುಗಿಲಂತೆ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ ): ಶಬರಿ
ಉಪಮಾನ ( ಅವರ್ಣ್ಯ) : ಬಿಳಿಮುಗಿಲು
ಉಪಮಾವಾಚಕ ಪದ : ಅಂತೆ
ಸಮಾನಧರ್ಮ :ತೇಲುವುದು
ಸಮನ್ವಯ : ಇಲ್ಲಿ ಉಪಮೇಯವಾದ ಶಬರಿಯನ್ನು ಉಪಮಾನವಾದ
ಬಿಳಿಮುಗಿಲಿಗೆ
ಪರಸ್ಪರ ಹೋಲಿಸಿ ಹೇಳಿರುವುದರಿಂದ
ಇದು ಉಪಮಾಲಂಕಾರವಾಗಿದೆ.
೬. ಹಸುಳೆಯಂದದಿ ಒಲಿದಳು
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ ) : ಶಬರಿ
ಉಪಮಾನ ( ಅವರ್ಣ್ಯ) : ಹಸುಳೆ
ಉಪಮಾವಾಚಕ ಪದ : ಅಂದದಿ
ಸಮಾನಧರ್ಮ : ಒಲಿದಳು
ಸಮನ್ವಯ : ಇಲ್ಲಿ ಉಪಮೇಯವಾದ ಶಬರಿಯನ್ನು ಉಪಮಾನವಾದ ಹಸುಳೆಗೆ
ಪರಸ್ಪರ ಹೋಲಿಸಿ ಹೇಳಿರುವುದರಿಂದ ಇದು
ಉಪಮಾಲಂಕಾರವಾಗಿದೆ.
೭. ಪ್ರಾಚೀನ ಮಹಾಕಾವ್ಯದಂತೆ
ವೂಲವರ್ಥವೊಂದು ಮಹಾಕೋಶವಾಗಿದೆ.
ಅಲಂಕಾರದ
ಹೆಸರು: ಉಪಮಾಲಂಕಾರ
ಲಕ್ಷಣ
: ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ
ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ವೂಲವರ್ಥ
ಉಪಮಾನ ( ಅವರ್ಣ್ಯ) : ಪ್ರಾಚೀನ ಮಹಾಕಾವ್ಯ
ಉಪಮಾವಾಚಕ
ಪದ : ಅಂತೆ
ಸಮಾನಧರ್ಮ: ಮಹಾಕೋಶವಾಗಿದೆ
ಸಮನ್ವಯ
: ಇಲ್ಲಿ ಉಪಮೇಯವಾದ ವೂಲವರ್ಥನ್ನು
ಉಪಮಾನವಾದ ಪ್ರಾಚೀನ
ಮಹಾಕಾವ್ಯಕ್ಕೆ ಪರಸ್ಪರ
ಹೋಲಿಸಿ ಹೇಳಿರುವುದರಿಂದ ಇದು ಉಪಮಾಲಂಕಾರವಾಗಿದೆ.
೮. ಖಳನೊಳವಿಂಗೆ ಕುಪ್ಪೆ
ವರಮೆಂಬವೊಲಾಂಬರಮುಂಟೆ ನಿನ್ನದೊಂ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ
ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ಖಳ (
ದುಷ್ಟ ದ್ರುಪದ)
ಉಪಮಾನ ( ಅವರ್ಣ್ಯ) :ನೊಳವಿಂಗೆ ಕುಪ್ಪೆವರಂ
ಉಪಮಾವಾಚಕ ಪದ : ವೊಲ್
ಸಮಾನಧರ್ಮ: ( ಸ್ಪಷ್ಟವಾಗಿಲ್ಲ)
ಸಮನ್ವಯ : ಇಲ್ಲಿ
ಉಪಮೇಯವಾದ ದ್ರುಪದನ ಯೋಗ್ಯತೆಯನ್ನು ಉಪಮಾನವಾದ ನೋಣದ
ಯೋಗ್ಯತೆಗೆ ಪರಸ್ಪರ ಹೋಲಿಸಿ
ಹೇಳಿರುವುದರಿಂದ ಇದು ಉಪಮಾಲಂಕಾರವಾಗಿದೆ
೯. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು
ವಿಷಬೆರೆದಂತೆ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ
ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ಸತಿಪತಿಗಳೊಂದಾಗದವನ
ಭಕ್ತಿ
ಉಪಮಾನ ( ಅವರ್ಣ್ಯ)
: ಅಮೃತದೊಳು ಬೆರೆತ ವಿಷ
ಉಪಮಾವಾಚಕ ಪದ : ಅಂತೆ
ಸಮಾನಧರ್ಮ: ಸ್ಪಷ್ಟವಾಗಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ಸತಿಪತಿಗಳೊಂದಾಗದವನ ಭಕ್ತಿಯನ್ನು ಉಪಮಾನವಾದ
ಅಮೃತದೊಳು ಬೆರೆತ ವಿಷಕ್ಕೆ ಪರಸ್ಪರ ಹೋಲಿಸಿ ಹೇಳಿರುವುದರಿಂದ ಇದು
ಉಪಮಾಲಂಕಾರವಾಗಿದೆ
೧೦. ನೀಚರಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು
ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ನೀಚರಿಗೆ
ಮಾಡುವ ಉಪಕಾರ
ಉಪಮಾನ ( ಅವರ್ಣ್ಯ)
: ಹಾವಿಗೆ ಎರೆದ ಹಾಲು
ಉಪಮಾವಾಚಕ ಪದ : ಅಂತೆ
ಸಮಾನಧರ್ಮ:: ಸ್ಪಷ್ಟವಾಗಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ನೀಚರಿಗೆ ಮಾಡುವ ಉಪಕಾರವನ್ನು ಉಪಮಾನವಾದ
ಹಾವಿಗೆ ಎರೆದ ಹಾಲಿಗೆ ಪರಸ್ಪರ ಹೋಲಿಸಿ ಹೇಳಿರುವುದರಿಂದ
ಇದು ಉಪಮಾಲಂಕಾರವಾಗಿದೆ
೧೧. ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು.
ಅಲಂಕಾರದ
ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ಭೀಮ
ದುರ್ಯೋಧನರು
ಉಪಮಾನ ( ಅವರ್ಣ್ಯ)
: ಮದಗಜಗಳು
ಉಪಮಾವಾಚಕ
ಪದ : ಅಂತೆ
ಸಮಾನಧರ್ಮ: ಹೊರಾಡುವುದು
ಸಮನ್ವಯ : ಇಲ್ಲಿ ಉಪಮೇಯವಾದ ಭೀಮ ದುರ್ಯೋಧನರನ್ನು ಉಪಮಾನವಾದ ಮದಗಜಗಳಿಗೆ
ಪರಸ್ಪರ ಹೋಲಿಸಿ ಹೇಳಿರುವುದರಿಂದ ಇದು
ಉಪಮಾಲಂಕಾರವಾಗಿದೆ
೧೨. ಸೀತೆಯ ಮುಖ ಕಮಲದಂತೆ ಅರಳಿತು
ಅಲಂಕಾರದ
ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ
ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ಸೀತೆಯ ಮುಖ
ಉಪಮಾನ ( ಅವರ್ಣ್ಯ)
:: ಕಮಲ
ಉಪಮಾವಾಚಕ ಪದ :: ಅಂತೆ
ಸಮಾನಧರ್ಮ: : ಅರಳುವುದು
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲ
ಕ್ಕೆ
ಪರಸ್ಪರ ಹೋಲಿಸಿ ಹೇಳಿರುವುದರಿಂದ ಇದು
ಉಪಮಾಲಂಕಾರವಾಗಿದೆ.
೧೩. ಒಳಗಿನ ಮಂದಿ ಗುಂಡು ಹೊಡಿಸಿದರೊ ಮುಂಗಾರಿನ ಸಿಡಿಲ ಸಿಡಿದಾíAಗ
ಅಲಂಕಾರದ
ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ
ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ಒಳಗಿನ
ಮಂದಿ ಗುಂಡು ಹೊಡೆಯುವುದು
ಉಪಮಾನ ( ಅವರ್ಣ್ಯ)
:: ಮುಂಗಾರಿನಲ್ಲಿ ಸಿಡಿಲು ಸಿಡಿಯುವುದು
ಉಪಮಾವಾಚಕ ಪದ :: ಹಾಂಗ
ಸಮಾನಧರ್ಮ:: ಹೊಡೆಯುವುದು
ಸಮನ್ವಯ : ಇಲ್ಲಿ ಉಪಮೇಯವಾದ ಒಳಗಿನ ಮಂದಿ ಗುಂಡು ಹೊಡೆಯುವುದನ್ನು ಉಪಮಾನವಾದ
ಮುಂಗಾರಿನಲ್ಲಿ ಸಿಡಿಲು
ಸಿಡಿಯುವುದಕ್ಕೆ ಪರಸ್ಪರ ಹೋಲಿಸಿ ಹೇಳಿರುವುದರಿಂದ ಇದು ಉಪಮಾಲಂಕಾರವಾಗಿದೆ
೧೪.ಸಿಡಿಲು ಸಿಡಿದಾíAಗ ಗುಂಡು ಸುರಿದಾವ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ :
ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ ಅದು ಉಪಮಾಲಂಕಾರ
ಉಪಮೇಯ ( ವರ್ಣ್ಯ
): ಗುಂಡು
ಸುರಿಯುವುದು
ಉಪಮಾನ ( ಅವರ್ಣ್ಯ)
: ಸಿಡಿಲು ಸಿಡಿಯುವುದು
ಉಪಮಾವಾಚಕ ಪದ: ಹಾಂಗ
ಸಮಾನಧರ್ಮ: ಸುರಿಯುವುದು
ಸಮನ್ವಯ : ಇಲ್ಲಿ ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು
ಸಿಡಿಯುವುದಕ್ಕೆ ಪರಸ್ಪರ ಹೋಲಿಸಿ
ಹೇಳಿರುವುದರಿಂದ ಇದು ಉಪಮಾಲಂಕಾರವಾಗಿದೆ
೧೫. ಬಳಾರಿಯ ಮನೆಯಂ
ಪರಕೆಯ ಕುರಿ ಪುಗಿಸುವಂತೆ
ಅಲಂಕಾರದ ಹೆಸರು: ಉಪಮಾಲಂಕಾರ
ಲಕ್ಷಣ : ಎರಡು ವಸ್ತುಗಳಿಗೆ
ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.
ಉಪಮೇಯ ( ವರ್ಣ್ಯ
):ದುಷ್ಟಬುದ್ಧಿಯ ತಂದೆ
ಪ್ರೇಮಮತಿ
ಉಪಮಾನ ( ಅವರ್ಣ್ಯ)
: ಬಳಾರಿಯ ಮನೆಗೆ ಕೊಂಡೊಯ್ಯುವ ಹರಕೆಯ ಕುರಿ
ಉಪಮಾವಾಚಕ ಪದ: ಅಂತೆ
ಸಮಾನಧರ್ಮ: ಪುಗಿಸುವುದು
ಸಮನ್ವಯ : ಇಲ್ಲಿ ಉಪಮೇಯವಾದ ದುಷ್ಟಬುದ್ಧಿಯ ತಂದೆಯನ್ನು
ಉಪಮಾನವಾದ ಹರಕೆಯ
ಕುರಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರ.
೧೬. ಶಾನುಭೋಗರು ತಮ್ಮ ವೇಗವನ್ನು ಹೊಂದಿಸಿಕೊಂಡು
ಕುಲಾಲಚಕ್ರದಂತೆ ತಿರುಗುತ್ತಿದ್ದರು.
ಅಲಂಕಾರದ ಹೆಸರು ಉಪಮಾಲಂಕಾರ
ಲಕ್ಷಣ : ಎರಡು ವಸ್ತು ಅಥವಾ ಸನ್ನಿವೇಶಗಳಿಗೆ ಪರಸ್ಪರ ಹೋಲಿಕೆಯನ್ನು ಮಾಡಿ
ವರ್ಣಿಸಿದ್ದರೆ
ಅದು ಉಪಮಾಲಂಕಾರ
ಉಪಮೇಯ
( ವರ್ಣ್ಯ ):ಶಾನುಭೋಗರು
ಉಪಮಾನ ( ಅವರ್ಣ್ಯ)
: ಕುಲಾಲಚಕ್ರ
ಉಪಮಾವಾಚಕ ಪದ: ಅಂತೆ
ಸಮಾನಧರ್ಮ: ತಿರುಗುವಿಕೆ
ಸಮನ್ವಯ : ಇಲ್ಲಿ
ಉಪಮೇಯವಾದ ಶಾನುಬೋಗರನ್ನು ಉಪಮಾನವಾದ ಕುಲಾಲಚಕ್ರಕ್ಕೆ
ಹೋಲಿಸಿರುವುದರಿಂದ ಇದು
ಉಪಮಾಲಂಕಾರ.
ಇನ್ನು ಕೆಲವು ಉದಾಹರಣೆಗಳು ಅಭ್ಯಾಸಕ್ಕೆ
೧೭. ದುರ್ಯೋಧನನ್ನು ಅರಗಿನ ಮನೆ ಕಟ್ಟಿದಂತೆ
೧೮. ಪುಣ್ಯದೊಂದು ಪೆರ್ಮರನುಳಿವಂತೆ ನೀನುಳಿದೆ
೧೯. ಮರನೇರಿದ ಮರ್ಕಟನಂತೆ
೨೦. ಅಂದಣವನೇರಿದ ಸೊಣಗನಂತೆ
೨೧. ಹುಡಿದರೆ ಮುತ್ತಿನ ಹಾರದಂತಿರಬೇಕು
೨೨. ನುಡಿದರೆ
ಸ್ಪಟಿಕದ ಶಲಾಕೆಯಂತಿರಬೇಕು.
೨೩. ನುಡಿದರೆ
ಮಾಣಿಕ್ಯದ ದೀಪ್ತಿಯಂತಿರಬೇಕು.
ರೂಪಕಾಲಂಕಾರ
೧.
ಅಳ್ಳರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ
ನಿನ್ನನರಿಯದೆ ಪೇಳು ವಿಶ್ವಾಮಿತ್ರ
ಅಲಂಕಾರದ ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ ಸಾಮ್ಯತೆಯಿಂದಾಗಿ
ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ಒಡಲಬೇಗೆ
ಉಪಮಾನ : ಬೆಂಕಿಯುರಿ
ಸಮನ್ವಯ : ಇಲ್ಲಿ ಉಪಮೇಯವಾದ ಅಯೊಧ್ಯೆಯ ಪ್ರಜೆಗಳ
ಒಡಲಬೇಗೆಯನ್ನು
ಉಪಮಾನವಾದ ಬೆಂಕಿಯುರಿಗೆ ಅಭೇದವಾಗಿ ರೂಪಿಸಿರುವುದರಿಂದ
ಇದು ರೂಪಕಾಲಂಕಾರ.
೨. ಮಾರಿಗೌತಣವಾಯ್ತು
ನಾಳಿನ ಭಾರತವು.
ಅಲಂಕಾರದ
ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ
ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ನಾಳಿನ ಭಾರತ
ಉಪಮಾನ : ಮಾರಿಗೌತಣ
ಸಮನ್ವಯ :ಇಲ್ಲಿ ಉಪಮೇಯವಾದ ನಾಳಿನ ಭಾರತವನ್ನು
ಉಪಮಾನವಾದ ಮಾರಿಗೌತಣಕ್ಕೆ ಅಭೇದವಾಗಿ
ರೂಪಿಸಿರುವುದರಿಂದ
ಇದು ರೂಪಕಾಲಂಕಾರ.
೩. ಆತ್ಮ ಸುರಭಿ
ಅಲಂಕಾರದ ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ ಸಾಮ್ಯತೆಯಿಂದಾಗಿ
ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ಆತ್ಮ
ಉಪಮಾನ : ಸುರಭಿ
ಸಮನ್ವಯ : ಇಲ್ಲಿ ಉಪಮೇಯವಾದ ಆತ್ಮವನ್ನು ಉಪಮಾನವಾದ
ಸುರಭಿಗೆ ಅಭೇದವಾಗಿ
ರೂಪಿಸಿರುವುದರಿಂದ ಇದು ರೂಪಕಾಲಂಕಾರ.
೪. ಭೂಮಿಜಾತೆ ಆತ್ಮಕಾಮಕಲ್ಪಲತೆ
ಅಲಂಕಾರದ ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ
ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ಆತ್ಮ
ಉಪಮಾನ : ಕಾಮಕಲ್ಪಲತೆ
ಸಮನ್ವಯ : ಇಲ್ಲಿ ಉಪಮೇಯವಾದ ಆತ್ಮವನ್ನು ಉಪಮಾನವಾದ
ಕಾಮಕಲ್ಪಲತೆಗೆ ಅಭೇದವಾಗಿ
ರೂಪಿಸಿರುವುದರಿಂದ ಇದು ರೂಪಕಾಲಂಕಾರ.
೫. ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ
ಅಲಂಕಾರದ ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ
ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ಶೋಕ
ಉಪಮಾನ : ಉಲ್ಕೆ
ಸಮನ್ವಯ : ಇಲ್ಲಿ ಉಪಮೇಯವಾದ ಶೋಕವನ್ನು ಉಪಮಾನವಾದ
ಉಲ್ಕೆಗೆ ಅಭೇದವಾಗಿ
ರೂಪಿಸಿರುವುದರಿಂದ ಇದು ರೂಪಕಾಲಂಕಾರ
೬. ಶಾನುಬೋಗರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು.
ಅಲಂಕಾರದ ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ
ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ವದನ
ಉಪಮಾನ : ಅರವಿಂದ
ಸಮನ್ವಯ : ಇಲ್ಲಿ ಉಪಮೇಯವಾದ ವದನವನ್ನು ಉಪಮಾನವಾದ
ಅರವಿಂದಕ್ಕೆ ಅಭೇದವಾಗಿ
ರೂಪಿಸಿರುವುದರಿಂದ ಇದು ರೂಪಕಾಲಂಕಾರ
೭. ಪ್ರೀತಿಯ ಹಣತೆಯ ಹಚ್ಚೋಣ
ಅಲಂಕಾರದ ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ
ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ಪ್ರೀತಿ
ಉಪಮಾನ : ಹಣತೆ
ಸಮನ್ವಯ : ಇಲ್ಲಿ ಉಪಮೇಯವಾದ ಪ್ರೀತಿಯನ್ನು ಉಪಮಾನವಾದ
ಹಣತೆಗೆ ಅಭೇದವಾಗಿ
ರೂಪಿಸಿರುವುದರಿಂದ ಇದು ರೂಪಕಾಲಂಕಾರ
೮.
ಶೋಕದುಲ್ಕೆ
ಅಲಂಕಾರದ ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ
ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ಶೋಕ
ಉಪಮಾನ : ದುಲ್ಕೆ
ಸಮನ್ವಯ : ಇಲ್ಲಿ ಉಪಮೇಯವಾದ ಶ್ರೀರಾಮನ
ಶೋಕವನ್ನು ಉಪಮಾನವಾದ ಉಲ್ಕೆಗೆ ಅಭೇದವಾಗಿ
ರೂಪಿಸಿರುವುದರಿಂದ
ಇದು ರೂಪಕಾಲಂಕಾರ
೯. ಒಲುಮೆ ಬತ್ತಿದ ಎದೆಯ ಮರಳಿನಲ್ಲಿ
ಅಲಂಕಾರದ
ಹೆಸರು: ರೂಪಕಾಲಂಕಾರ
ಲಕ್ಷಣ : ಅತಿ
ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ
ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.
ಉಪಮೇಯ : ಎದೆ
ಉಪಮಾನ : ಮರಳು
ಸಮನ್ವಯ : ಇಲ್ಲಿ ಉಪಮೇಯವಾದ ಎದೆಯನ್ನು ಉಪಮಾನವಾದ
ಮರಳಿಗೆ ಅಭೇದವಾಗಿ
ರೂಪಿಸಿರುವುದರಿಂದ ಇದು ರೂಪಕಾಲಂಕಾರ
ಇನ್ನು ಕೆಲವು ಉದಾಹರಣೆಗಳು
ಅಭ್ಯಾಸಕ್ಕೆ
೧೦. ಭಾರತ ಬೋಧಿ
೧೧. ರಾಜಶಿರ ದಾಸವಾಳದ ಪೂಜೆ ಸಲ್ಲುವುದು ನಿನ್ನ ಪಾದಕೆ
ನಾಳೆ
೧೨. ಸೀತೆಯ ಮುಖ ಕಮಲ ಅರಳಿತು
೧೩. ಭವ ಸಮುದ್ರ
೧೪. ಭಯದ ಶಲ್ಯ
೧೫. ವದನಾರವಿಂದ
ದೃಷ್ಟಾಂತಾಲಂಕಾರ
೧. ಮಾತು ಬಲ್ಲವನಿಗೆ
ಜಗಳವಿಲ್ಲ ; ಊಟಬಲ್ಲವನಿಗೆ ರೋಗವಿಲ್ಲ.
ಅಲಂಕಾರದ ಹೆಸರು : ದೃಷ್ಟಾಂತಾಲಂಕಾರ
ಲಕ್ಷಣ : ಎರಡು ಬೇರೆ
ಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು
ತೋರುತ್ತಿದ್ದರೆ
ಅದು ದೃಷ್ಟಾಂತಾಲಂಕಾರ
ಉಪಮೇಯ ( ಬಿಂಬ ) : ಮಾತು
ಬಲ್ಲವನಿಗೆ ಜಗಳವಿಲ್ಲ
ಉಪಮಾನ
( ಪ್ರತಿಬಿಂಬ) : ಊಟಬಲ್ಲವನಿಗೆ ರೋಗವಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ಮಾತುಬಲ್ಲವನಿಗೆ ಜಗಳವಿಲ್ಲ
ಹಾಗೂ ಉಪಮಾನವಾದ
ಊಟಬಲ್ಲವನಿಗೆ ರೋಗವಿಲ್ಲ ಇವೆರಡೂ ಬಿಂಬ
ಪ್ರತಿಬಿಂಬದಂತೆ ಇರುವುದರಿಂದ
ಇದು ದೃಷ್ಟಾಂತಾಲಂಕಾರ.
೨. ಊರು ಉಪಕಾರ ಅರಿಯದು ; ಹೆಣ ಶೃಂಗಾರ ಅರಿಯದು.
ಅಲಂಕಾರದ ಹೆಸರು : ದೃಷ್ಟಾಂತಾಲಂಕಾರ
ಲಕ್ಷಣ : ಎರಡು ಬೇರೆ
ಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು
ತೋರುತ್ತಿದ್ದರೆ
ಅದು ದೃಷ್ಟಾಂತಾಲಂಕಾರ
ಉಪಮೇಯ ( ಬಿಂಬ ) : ಊರು ಉಪಕಾರ
ಅರಿಯದು
ಉಪಮಾನ
( ಪ್ರತಿಬಿಂಬ) : ಹೆಣ ಶೃಂಗಾರ ಅರಿಯದು
ಸಮನ್ವಯ : ಇಲ್ಲಿ ಉಪಮೇಯವಾದ ಊರಿಗೆ ಉಪಕಾರ ಮಾಡುವುದು ಹಾಗೂ
ಉಪಮಾನವಾದ
ಹೆಣಕ್ಕೆ ಶೃಂಗಾರ ಮಾಡುವುದು ಇವೆರಡು ಮಾತುಗಳು ಅರ್ಥಸಾದೃಶ್ಯದಿಂದ
ಬಿಂಬ ಪ್ರತಿಬಿಂಬದಂತೆ ಇರುವುದರಿಂದ ಇದು ದೃಷ್ಟಾಂತಾಲಂಕಾರ.
ಉದಾಹರಣೆಗಳು ಅಭ್ಯಾಸಕ್ಕೆ
೩. ಅಟ್ಟಮೇಲೆ ಒಲೆ ಉರಿಯಿತು ; ಕೆಟ್ಟ ಮೇಲೆ ಬುದ್ಧಿಬಂತು
ಉತ್ಪ್ರೇಕ್ಷಾಲಂಕಾರ
೧. ಅಚ್ಛೋದ ಸರೋವರವು
ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ
ಶೋಭಿಸಿತು.
ಅಲಂಕಾರದ ಹೆಸರು : ಉತ್ಪ್ರೇಕ್ಷಾಲಂಕಾರ
ಲಕ್ಷಣ : ಉಪಮೇಯವಾದ
ವಸ್ತುವನ್ನು ಅಥವ ಸನ್ನಿವೇಶವನ್ನು ಉಪಮಾನವಾದ
ವಸ್ತುವನ್ನಾಗಿ
ಅಥವಾ ಸನ್ನಿವೇಶವನ್ನಾಗಿ ಸಂಭಾವಿಸಿ ಅಂದರೆ
ಕಲ್ಪಿಸುವುದೇ ಉತ್ಪ್ರೇಕ್ಷಾಲಂಕಾರ.
ಉಪಮೇಯ : ಅಚ್ಛೋದ
ಸರೋವರ
ಉಪಮಾನ : ರನ್ನಗನ್ನಡಿ
ಸಮನ್ವಯ :
ಉಪಮೇಯವಾದ ಅಚ್ಛೋದ ಸರೋವರವನ್ನು ಉಪಮಾನವಾದ ರನ್ನಗನ್ನಡಿ
ಎಂಬುದಾಗಿ ಕಲ್ಪಿಸಿರುವುದರಿಂದ ಇದು ಉತ್ಪ್ರೇಕ್ಷಾಲಂಕಾರ.
ಅರ್ಥಾಂತರನ್ಯಾಸಾಲಂಕಾರ
೧. ಆತನು ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದು
ಉತ್ತೀರ್ಣನಾದನು. ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ
ಅಲಂಕಾರದ ಹೆಸರು: ಅರ್ಥಾಂತರನ್ಯಾಸಾಲಂಕಾರ
ಲಕ್ಷಣ : ಒಂದು
ವಿಶೇಷ ವಾಕ್ಯವನ್ನು ( ಉಪಮೇಯ) ಸಾಮಾನ್ಯ ವಾಕ್ಯದಿಂದ ( ಉಪಮಾನ)
ಸಮರ್ಥನೆ ಮಾಡುವುದೇ ಅರ್ಥಾಂತರನ್ಯಾಸಾಲಂಕಾರ.
ಉಪಮೇಯ ( ವಿಶೇಷ ವಾಕ್ಯ ) : ಆತನು
ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಪಾಸಾದನು.
ಉಪಮಾನ ( ಸಾಮಾನ್ಯ ವಾಕ್ಯ : ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ?
ಸಮನ್ವಯ: ಇಲ್ಲಿ ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು
ಪಾಸಾದನು ಎಂಬ
ವಿಶೇಷ ವಾಕ್ಯವನ್ನು (ಉಪಮೇಯ) ಲೋಕದಲ್ಲಿ
ಎಲ್ಲ ಬುದ್ಧಿವಂತ ಮಕ್ಕಳಿಗೆ
ಅನ್ವಯವಾಗುವಂತಹ ಬುದ್ಧಿವಂತರಾದ ಮಕ್ಕಳಿಗೆ
ಪರೀಕ್ಷೆಯೊಂದು ಲೆಕ್ಕವೇ? ಎಂಬ
ಸಾಮಾನ್ಯ ವಾಕ್ಯದಿಂದ (ಉಪಮಾನ) ಸಮರ್ಥಿಸಿರುವುದರಿಂದ
ಇದು
ಅರ್ಥಾಂತರನ್ಯಾಸಾಲಂಕಾರ.
ಉದಾಹರಣೆಗಳು
ಅಭ್ಯಾಸಕ್ಕೆ
೨. ಪರಮಾತ್ಮನು ತನ್ನ
ಭಕ್ತರನ್ನು ಸದಾ ಕಾಪಾಡುತ್ತಾನೆ. ಭಕ್ತನಾದ ಪ್ರಹ್ಲಾದನಿಗೆ ತಂದೆಯಿಂದ ಗಂಡಾಂತರ ಬಂದಾಗ
ಪರಮಾತ್ಮನು ಕಾಪಾಡಿದನು.
೩. ಆತನು ಉಂಡಮನೆಗೆ
ಕೇಡುಬಗೆದನು ; ಕೃತಘ್ನರು ಏನನ್ನು ತಾನೆ ಮಾಡುವುದಿಲ್ಲ?
ಶ್ಲೇಷಾಲಂಕಾರ
೧. ಅತಿಶಯ ಪದಾರ್ಥ ನಿಕರ |
ಪ್ರತೀತಿಯಂ ಪಡೆವ ಪಾದವಿನ್ಯಾಸಂ ಭೂ||
ನುತಮಾಗದಲ್ತೆನಿರ್ದೋ |
ಷತೆಯಿಂದಲ್ಲದೆ ಸಮಂತು ಕವಿಗಂ ರವಿಗಂ ||
ಅಲಂಕಾರದ ಹೆಸರು: ಶ್ಲೇಷಾಲಂಕಾರ
ಲಕ್ಷಣ : ಒಂದು ಪದವು ಒಂದಕ್ಕಿಂತ
ಹೆಚ್ಚು ಅರ್ಥಕೊಡುವಂತಿದ್ದರೆ ಅಂತಹ ಪದ
ಶ್ಲೇಷ ಪದ ಎನ್ನುವರು . ಇಂತಹ
ಶ್ಲೇಷಾರ್ಥಗಳನ್ನು ನೀಡಬಲ್ಲ ಪದಗಳಿಗಿರುವ
ಅಲಂಕಾರವೇ ಶ್ಲೇಷಾಲಂಕಾರ.
ಪದ ಕವಿಯ ಪರವಾಗಿ (ಉಪಮಾನ) ರವಿಯ ಪರವಾಗಿ (ಉಪಮೇಯ)
ಪದಾರ್ಥ - ಪದದ ಅರ್ಥ (ಶಬ್ದಾರ್ಥ) - ವಸ್ತು
ಪಾದ - ಪದ್ಯದ ಸಾಲು - ಕಿರಣ
ನಿರ್ದೋಷತೆ
- ದೋಷವಿಲ್ಲದಿರುವಿಕೆ -
ಕತ್ತಲಿಲ್ಲದಿರುವಿಕೆ ( ಹಗಲು)
ಸಮನ್ವಯ :
ಇಲ್ಲಿ ಕವಿ ಮತ್ತು ರವಿ ಒಂದೇ ಬಗೆಯ ಪದಗಳಿಂದ ವರ್ಣಿತರಾಗಿದ್ದಾರೆ.
ಈ ವರ್ಣನೆಯಲ್ಲಿ ಪದಾರ್ಥ, ಪಾದ, ನಿರ್ದೋಷತೆ ಎಂಬ ಪದಗಳು ಶ್ಲೇಷಾರ್ಥದಿಂದ
ಕೂಡಿದೆ. ಆದ್ದರಿಂದ ಇದು ಶ್ಲೇಷಾಲಂಕಾರ.
ತುಂಬಾ ಚೆನ್ನಾಗಿದೆ
ReplyDeleteIt's very helpful
ReplyDeleteಚೆನ್ನಾಗಿದೆ, ಆದರೆ ಉತ್ಪ್ರೇಕ್ಷೆ, ಶ್ರೇಷ್ಠ, ಅರ್ಥಾಂತರನ್ಯಾಸ ಅಲಂಕಾರಗಳಿಗೆ ಕನಿಷ್ಟ ನಾಲ್ಕು ಉದಾಹರಣೆ ತಿಳಿಸಬಹುದಾಗಿತ್ತು
ReplyDeleteಶೇಷಾಲಂಕಾರ ಉದಾಹರಣೆ
ReplyDeleteSupper sir l will use it. Tq
ReplyDeleteಉತ್ತಮ
ReplyDeleteThank u so much,it is very helpful
ReplyDeleteS
DeleteThank you for this chat sir
ReplyDeleteCorrect sir
ReplyDeleteTq sir
ReplyDeleteಶಾಲೆಗೆ ವಿದ್ಯಾರ್ಥಿಯೊಂದು ರತ್ನ ಇದು ಯಾವ ಅಲಂಕಾರ
ReplyDeleteಶಾಲೆಗೆ ವಿದ್ಯಾರ್ಥಿಯೊಂದು ರತ್ನ ಇದು ಯಾವ ಅಲಂಕಾರ
ReplyDeleteಇದು ರೂಪಕಾಲಂಕಾರ ಏಕೆಂದರೆ ಇದರಲ್ಲಿ ಅಂತೆ ಎಂಬ ಪದ ಇಲ್ಲ
Deleteತುಂಬ ಉಪಯುಕ್ತವಾಗಿದೆ, ಧನ್ಯವಾದಗಳು
ReplyDeleteನೀವು ಇದರಲ್ಲಿ ಇನ್ನಷ್ಟು ಸೇರಿಸಿ ದಯವಿಟ್ಟು
ReplyDeleteತುಂಬಾ ಚನ್ನಾಗಿಇದೆ ಉಪಯೋಗ ಆಯಿತು
ReplyDeleteಸಹಾಯಕವಾಗಿದೆ
ReplyDeleteಸಹಾಯಕವಾಗಿದೆ
ReplyDeleteದನ್ಯವಾದಗಳು.
ReplyDeleteವದನಾರವಿಂದ ಯಾವ ಅಲಂಕಾರ
ReplyDeleteನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ಇದು ಯಾವ ಅಲಂಕಾರ
ReplyDeleteಉಪಮಾ ಅಲಂಕಾರ...
Deleteಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeleteಶಾನುಭೋಗರು ಹುಲಿಯ ವೇಗಕ್ಕೆ ತಕ್ಕಂತೆ ತಮ್ಮ ವೇಗವನ್ನು ಹೊಂದಿಸಿಕೊಂಡು ಕುಲಾಲ ಚಕ್ರದಂತೆ ತಿರುಗಿದರು ಇದರಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯ ಗೊಳಿಸಿ
ReplyDeleteTq so much 🥰❤ very helpful😊
ReplyDelete𝗧𝗵𝗮𝗻𝗸 𝘆𝗼𝘂🙏🙏🙏
ReplyDelete